ಡುಮ್ಮಣ್ಣನ ಪಕ್ಕ ಕೂರಿಸಿದಕ್ಕೆ ಪರಿಹಾರ ಕೊಡಿ!

Solve the dummanna side by side!

19-11-2018

ಲಂಡನ್: ತನ್ನನ್ನು ಸ್ಥೂಲಕಾಯದ ವ್ಯಕ್ತಿಯ ಪಕ್ಕದ ಸೀಟಿನಲ್ಲಿ ಕೂರಿಸಿದ ವಿಮಾನ ಯಾನ ಸಂಸ್ಥೆ

ವಿರುದ್ಧ ಪ್ರಯಾಣಿಕರೊಬ್ಬರು ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ‘ಬ್ಯಾಂಕಾಕ್ ನಗರದಿಂದ

ಲಂಡನ್ ಗೆ ಪ್ರಯಾಣ ಮಾಡುವ ವೇಳೆ ತನ್ನನ್ನು ದೈತ್ಯಾಕಾರದ ವ್ಯಕ್ತಿಯ ಪಕ್ಕದ ಆಸನದಲ್ಲಿ

ಕೂರಿಸಿ, ದೈಹಿಕ ಸಮಸ್ಯೆ ಅನುಭವಿಸುವಂತೆ ಮಾಡಿದ್ದೀರಿ’ ಎಂದು ಸ್ಟೀಫನ್ ಪ್ರೊಸೆರ್ ಎಂಬ 51

ವರ್ಷದ ವ್ಯಕ್ತಿ ಬ್ರಿಟಿಷ್ ಏರ್‌ವೇಸ್‌ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

‘ನನ್ನ ಪಕ್ಕ ಕುಳಿತಿದ್ದ ವ್ಯಕ್ತಿ, ಸುಮಾರು ಆರೂವರೆ ಅಡಿಗಳಷ್ಟು ಎತ್ತರವಿದ್ದು, 130 ಕೆಜಿಗಿಂತ ಹೆಚ್ಚು

ತೂಕವಿರುವಂತೆ ಕಾಣುತ್ತಿದ್ದ. ಆತ ಸೀಟಿನೊಳಕ್ಕೆ ತನ್ನ ಪೃಷ್ಟವನ್ನು ತುರುಕಿಕೊಂಡು,

ಮೊಳಕಾಲುಗಳನ್ನು ಮುಂದಿನ ಸೀಟಿಗೆ ಒರಗಿಸಿ ಕುಳಿತಿದ್ದ. ಇದನ್ನು ಗಮನಿಸಿದ ನಾನು, ಅಲ್ಲಿ

ಕುಳಿತುಕೊಳ್ಳುವುದು ಕಷ್ಟವಾಗುತ್ತದೆ ಎಂದು ವಿಮಾನದ ಸಿಬ್ಬಂದಿ ಗಮನಕ್ಕೆ ತಂದರೂ ಏನೂ

ಪ್ರಯೋಜನವಾಗಲಿಲ್ಲ’ ಎಂದು ಸ್ಟೀಫನ್ ಆರೋಪಿಸಿದ್ದಾರೆ.

‘ಪಕ್ಕದಲ್ಲಿ ಡುಮ್ಮಣ್ಣ ಕುಳಿತಿದ್ದರಿಂದ, ನಾನು ನನ್ನ ಸೀಟಿನಲ್ಲಿ ಸಹಜವಾಗಿ ಕೂರಲು ಆಗಲಿಲ್ಲ, ಆ

ವ್ಯಕ್ತಿಯ ಶರೀರ ನನ್ನ ಮೇಲೆ ಭಾರ ಹೇರುತ್ತಿತ್ತು. ಹೀಗಿದ್ದರೂ ಆತನ ಜೊತೆಗೆ ನಾನು

ಜಗಳಕ್ಕಿಳಿಯಲಿಲ್ಲ. ಆದರೆ, ಬೇರೆ ಕಡೆ ಸೀಟು ಕೊಡುವಂತೆ ನಾನು ಮಾಡಿದ ಮನವಿಯನ್ನು

ವಿಮಾನದ ಸಿಬ್ಬಂದಿ ಪರಿಗಣಿಸಲಿಲ್ಲ’ ಎಂದು ಹೇಳಿದ್ದಾರೆ.

‘ಈ ವಿಮಾನ ಪ್ರಯಾಣ ಮುಗಿಸಿಕೊಂಡು ಬಂದ ನಂತರ ನಾನು ಸಾಕಷ್ಟು ಬಾರಿ ವೈದ್ಯರಲ್ಲಿಗೆ

ತೆರಳಿ ಚಿಕಿತ್ಸೆ ಪಡೆಯಬೇಕಾಯಿತು. ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಯಿತು’ ಎಂದಿರುವ

ಸ್ಟೀಫನ್ ಪ್ರೊಸೆರ್, ಬ್ರಿಟಿಷ್ ಏರ್‌ವೇಸ್ ಸಂಸ್ಥೆ ನನಗೆ ಪರಿಹಾರ ನೀಡಬೇಕು ಎಂದು

ಆಗ್ರಹಿಸಿದ್ದಾರೆ. ಆದರೆ, ಸ್ಟೀಫನ್ ಅವರ ಆರೋಪವನ್ನು ನಿರಾಕರಿಸಿರುವ ವಿಮಾನ ಯಾನ

ಸಂಸ್ಥೆ, ನಾವು ಗಮನಿಸಿದಂತೆ ಸ್ಟೀಫನ್ ಅವರಿಗೆ ಯಾವುದೇ ರೀತಿಯ ತೊಂದರೆಯೂ ಆಗಿಲ್ಲ

ಎಂದು ಹೇಳಿದೆ.


ಸಂಬಂಧಿತ ಟ್ಯಾಗ್ಗಳು

ಡುಮ್ಮಣ್ಣನ ಬ್ರಿಟಿಷ್ London Stephen


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ