ಸ್ವಂತ ಜಮೀನಿನಲ್ಲಿಯೇ ವಿಷಕುಡಿದ ರೈತ ಆತ್ಮಹತ್ಯೆಗೆ ಶರಣು !

Kannada News

03-06-2017

ಮಂಡ್ಯ:- ಕೆ.ಆರ್.ಪೇಟೆ ತಾಲ್ಲೂಕಿನ  ಶೀಳನೆರೆ ಹೋಬಳಿಯ ಉಯ್ಗೋನಹಳ್ಳಿ ಗ್ರಾಮದಲ್ಲಿ ಸಾಲದ ಬಾಧೆ ತಾಳಲಾರದೆ ತನ್ನ ಜಮೀನಿನಲ್ಲಿ ವಿಷ ಕುಡಿದು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಗೇಗೌಡ(50) ಮೃತ ರೈತ. ನಾಲ್ಕು ಎಕರೆ ಜಮೀನಿನಲ್ಲಿ ಭತ್ತ, ಕಬ್ಬು ಬೇಸಾಯ ಮಾಡಿದ್ದರು, ನೀರಿಲ್ಲದೆ ಬೆಳೆಗಳು ಒಣಗಿದ್ದನ್ನು ಕಂಡು ಮನನೊಂದಿದ್ದ ನಾಗೇಗೌಡ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರು ಪತ್ನಿ ಪದ್ಮಮ್ಮ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಿಂದಘಟ್ಟ ಕೆನರಾಬ್ಯಾಂಕ್, ವಿ.ಎಸ್.ಎಸ್.ಎನ್ ಬ್ಯಾಂಕ್ ಹಾಗೂ ಕೈಸಾಲ ಸೇರಿ 5ಲಕ್ಷ ಸಾಲ ಮಾಡಿದ್ದರು, ಸಾಲದ ಹಣ ಪಾವತಿಸುವಂತೆ ಕೆನರಾ ಬ್ಯಾಂಕ್ ನೀಡಿದ್ದ ನೋಟಿಸ್ ನಿಂದ ಕಂಗೆಟ್ಟ ನಾಗೇಗೌಡರು ಇಂದು ಬೆಳಿಗ್ಗೆ ತಮ್ಮ ಜಮೀನಿನಲ್ಲಿಯೇ ವಿಷಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆಯ ಬಗ್ಗೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ