ಹುಷಾರ್, ಇದು ಸ್ನೇಕ್ ವೆನೊಮ್ ಬಿಯರ್

19-11-2018
ಒಂದಿಷ್ಟು ‘ತೀರ್ಥ’ ಸೇವನೆ ಮಾಡಿದ ಹಾಗೂ ಆಗಬೇಕು, ಅದರೆ ಹೆವಿ ಅನ್ನಿಸದೆ ಆರಾಮವಾಗಿಯೂ ಇರಬೇಕು ಅನ್ನೋದು ನಿಮ್ಮ ಆಸೆ. ಅದಕ್ಕಾಗಿ ನೀವು ಒಂದೆರಡು ಪೆಗ್ ಬಿಯರ್ ಇಳಿಸುತ್ತೀರಿ, ಸಿಂಪಲ್ ಆಗಿ ಮನೆಗೆ ಹೋಗ್ತೀರಿ. ನಿಜವೇ, ಬ್ರಾಂದಿ, ವಿಸ್ಕಿ, ವೋಡ್ಕ, ಜಿನ್ ಇತ್ಯಾದಿಗಳಿಗೆ ಹೋಲಿಸಿದಲ್ಲಿ, ಬಿಯರ್ ನಲ್ಲಿರುವ ಆಲ್ಕೊಹಾಲ್ ಅಂಶ ತೀರ ಕಡಿಮೆ. ಒಂದು ಬಾಟಲಿ ಬಿಯರ್ ನಲ್ಲಿ ಹೆಚ್ಚೆಂದರೆ ಶೇ 8 ರಿಂದ 11ರಷ್ಟು ಆಲ್ಕೊಹಾಲ್ ಪ್ರಮಾಣ ಇರುತ್ತದೆ ಅಷ್ಟೇ. ಹೀಗಾಗಿ, ನೀವು ಒಂದಿಷ್ಟು ಹೆಚ್ಚಾಗಿಯೇ ಬಿಯರ್ ಗುಟುಕರಿಸಿದರೂ ಕೂಡ, ಉಂಡು ಉಪವಾಸಿ ಅಥವ ಬಳಸಿಯೂ ಬ್ರಹ್ಮಚಾರಿ ಅನ್ನುವ ಹಾಗೆ, ಕುಡಿದೂ ಕುಡಿಯದವನಂತೆ ಖುಷಿ ಖುಷಿಯಾಗಿ ಮನೆ ಸೇರಬಹುದು.
ಆದರೆ, ನಿಲ್ಲಿ ಇಲ್ಲೊಂದು ಬಿಯರ್ ಇದೆ, ಇದಕ್ಕಂತೂ ಈ ಮಾತು ಅನ್ವಯಿಸುವುದಿಲ್ಲ. ಈ ಬಾಟಲಿ ಓಪನ್ ಮಾಡುವುದಕ್ಕೆ ಮುಂಚೆ, ಇದರ ಹೆಸರನ್ನು ಸರಿಯಾಗಿ ಓದಿಕೊಳ್ಳಿ. ಹೌದು, ಇದು ಅಂತಿಂಥ ಬಿಯರ್ ಅಲ್ಲ, ಇದರ ಹೆಸರು Snake Venom, ಇದರಲ್ಲಿ ಶೇ.67.5 ರಷ್ಟು ಆಲ್ಕೊಹಾಲ್ ಪ್ರಮಾಣ ಇರುತ್ತದೆ. ಸ್ನೇಕ್ ವೆನೊಮ್ ಅಥವ ಹಾವಿನ ವಿಷ ಅನ್ನುವ ಇದರ ಹೆಸರೇ ಎಲ್ಲವನ್ನೂ ಹೇಳುತ್ತದೆ. ಹೀಗಾಗಿ, ಕಂಪನಿಯವರೇ ಈ ಬಿಯರ್ ಬಾಟಲಿ ಮೇಲೆ ಎಚ್ಚರಿಕೆಯ ಮಾತುಗಳನ್ನು ಬರೆದಿದ್ದಾರೆ.
ಈ ಬಿಯರ್, ಬ್ರಿಟನ್ ದೇಶದ ಭಾಗವಾಗಿರುವ ಸ್ಕಾಟ್ಲೆಂಡಿನ ಕೀತ್ ನಗರದಲ್ಲಿರುವ Brewmeister ಎಂಬ ಹೆಸರಿ ಬ್ರ್ಯುವೆರಿಯಲ್ಲಿ ತಯಾರಿಸಲ್ಪಡುತ್ತದೆ. ನೀವೇನಾದರೂ ಬಾರಿನಲ್ಲಿ ಕುಳಿತು, ಈ ಬಿಯರ್ ಅನ್ನು ಒಂದೇ ಬಾರಿಗೆ ಒಂದು ಬಾಟಲಿ ಕುಡಿದರೆ, ಮನೆಗೆ ಹೋಗುವ ಬದಲು ನೇರವಾಗಿ ಸ್ವರ್ಗಕ್ಕೆ ಹೋಗಿಬಿಡುತ್ತೀರಿ. ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿರುವ ಕಂಪನಿ, ಈ Snake Venom ಹೆಸರಿನ ಬಿಯರ್ ಅನ್ನು ಒಬ್ಬರಿಗೆ ಒಂದು ಬಾರಿಗೆ ಒಂದೇ ಬಾಟಲಿ ಮಾತ್ರ (275 ಮಿ.ಲೀ) ಮಾರುತ್ತದಂತೆ.
ಒಂದು ಕಮೆಂಟನ್ನು ಹಾಕಿ