ಸಂಬಂಧ ಗಟ್ಟಿಗೊಳಿಸುವ ಟಿವಿ...

Relationship tight TV ...

17-11-2018

ಪತಿ-ಪತ್ನಿಯಾಗಿ ನಿಮ್ಮ ಸಂಬಂಧ ಹಳಸುತ್ತಿದೆಯೇ? ಹಾಗಿದ್ದರೆ ಸ್ವಲ್ಪ ತಾಳಿ, ಅದನ್ನು ಸರಿ ಪಡಿಸಲು ಇಲ್ಲೊಂದು ಸುಲಭದ ಉಪಾಯವಿದೆ. ನೀವು ಮಾಡಬೇಕಾಗಿರುವುದಿಷ್ಟೇ. ಪ್ರತಿ ರಾತ್ರಿಯೂ ಜೊತೆಯಲ್ಲಿ ಕುಳಿತು ಸಾಕಷ್ಟು ಹೊತ್ತು ಟಿವಿ ನೋಡಿದರೆ ಸಾಕು, ನಿಮ್ಮ ಸಂಬಂಧ ಸುಧಾರಿಸುವ ಎಲ್ಲ ಸಾಧ್ಯತೆಗಳೂ ಇವೆ, ಎಂದು ಒಂದು ಸಂಶೋಧನೆ ಹೇಳುತ್ತದೆ. 

ಒಂದೇ ಪುಸ್ತಕವನ್ನು ಓದುವುದರಿಂದ, ಜೊತೆಯಲ್ಲಿ ಕುಳಿತು ಟಿವಿ ಧಾರಾವಾಹಿ, ಸಿನೆಮಾ  ಅಥವ ವಿವಿಧ ಕಾರ್ಯಕ್ರಮಗಳನ್ನು ನೋಡುವುದರಿಂದ, ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧ ಗಟ್ಟಿಯಾಗುತ್ತದಂತೆ. ಇನ್ನೂ ಸೋಜಿಗದ ಸಂಗತಿಯಿಂದರೆ, ನಿಮ್ಮ ಸಂಗಾತಿ ಒಂದು ಊರಿನಲ್ಲಿ ಮತ್ತು ನೀವು ಮತ್ತೊಂದು ಕಡೆ ಇದ್ದರೂ ಕೂಡ, ನೀವಿಬ್ಬರೂ ಬೇರೆ ಬೇರೆ ಊರಿನಿಂದಲೂ ನಿಮ್ಮಿಬ್ಬರಿಗೂ ಇಷ್ಟವಾದ ಸಿನೆಮಾ ಅಥವ ಸೀರಿಯಲ್ ನೋಡಿ, ಆ ಬಗ್ಗೆ ಮಾತನಾಡಿಕೊಂಡರೂ ಕೂಡ,  ಮೊದಲು ಹೇಳಿದ ರೀತಿಯಲ್ಲೇ ನಿಮ್ಮ ಸಂಬಂಧ ಗಾಢವಾಗುತ್ತದಂತೆ. ಸರಿ ಮತ್ತೆ, ಇವತ್ತಿನಿಂದಲೇ ಶುರು ಮಾಡಿ, ಸಾಧ್ಯವಾದರೆ ಜೊತೆಯಲಿ ಜೊತೆಯಲಿ ಎಂದು ಹಾಡುತ್ತಾ, ಒಟ್ಟಿಗೆ ಟಿವಿ ನೋಡಿ, ಸಂಬಂಧಗಳನ್ನು ಉಳಿಸಿಕೊಳ್ಳಿ.


ಸಂಬಂಧಿತ ಟ್ಯಾಗ್ಗಳು

ಟಿವಿ ಧಾರಾವಾಹಿ ಸಿನೆಮಾ TV Relationship


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ