ಕಾಡ್ಗಿಚ್ಚಿನಲ್ಲಿ ಸುಟ್ಟುಕರುಕಲಾದ ಕ್ಯಾಲಿಫೋರ್ನಿಯ

California burned in forest fire

16-11-2018

ಅಮೆರಿಕ ದೇಶದ ಪಶ್ಚಿಮ ಭಾಗದಲ್ಲಿರುವ ರಾಜ್ಯ ಕ್ಯಾಲಿಫೋರ್ನಿಯದಲ್ಲಿ, The Camp Fire ಎಂಬ ಹೆಸರಿನ ಕಾಡ್ಗಿಚ್ಚು ಭಯಂಕರ ಸ್ವರೂಪ ಪಡೆದಿದ್ದು, ಭಾರಿ ಸಾವು ನೋವು ಮತ್ತು ವಿನಾಶಕ್ಕೆ ಕಾರಣವಾಗುತ್ತಿದೆ. ಕ್ಯಾಲಿಫೋರ್ನಿಯದಲ್ಲಿ ಈಗಾಗಲೇ 12 ಸಾವಿರಕ್ಕೂ ಹೆಚ್ಚು ಮನೆಗಳು ಬೆಂಕಿಯಲ್ಲಿ ಬೆಂದುಹೋಗಿವೆ. ಈವರೆಗೆ ಸುಮಾರು 70 ಜನರು ಸಾವಿಗೀಡಾಗಿದ್ದು, 700ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ 8 ದಿನಗಳ ಹಿಂದೆ ಹುಟ್ಟಿಕೊಂಡ ಕಾಡ್ಗಿಚ್ಚು, ಭಾರಿ ವೇಗದಲ್ಲಿ ಹಬ್ಬುತ್ತಿದ್ದು, ಸ್ಥಳೀಯ ನಿವಾಸಿಗಳು ಅಲ್ಲಿಂದ ಪಾರಾಗುವುದೇ ಕಷ್ಟವಾಗಿದೆ. 

ಕಾಡ್ಗಿಚ್ಚನ್ನು ನಿಯಂತ್ರಣಕ್ಕೆ ತರಲು ಸುಮಾರು 10 ಸಾವಿರ ಅಗ್ನಿಶಾಮಕ ಸಿಬ್ಬಂದಿ ಹರ ಸಾಹಸ ಮಾಡುತ್ತಿದ್ದು, ಪರಿಸ್ಥಿತಿಯ ಅವಲೋಕನಕ್ಕೆ ಅಧ್ಯಕ್ಷ ಡೋನಲ್ಡ್ ಟ್ರಂಪ್ ಕೂಡ ಆಗಮಿಸುತ್ತಿದ್ದಾರೆ. ಒಂದುಕಾಲದಲ್ಲಿ ಬಂಗಾರದ ನಿಕ್ಷೇಪಗಳನ್ನು ಹೊಂದಿದ್ದ ಕ್ಯಾಲಿಫೋರ್ನಿಯ, ಚಿನ್ನದ ರಾಜ್ಯವೆಂದು ಹೆಸರಾಗಿತ್ತು. ಅಂಥ ರಾಜ್ಯ, ಇದೀಗ ಇತಿಹಾಸದಲ್ಲೇ ಅತ್ಯಂತ ಭೀಕರ ಕಾಡ್ಗಿಚ್ಚಿನ ಹಾವಳಿಯಿಂದ ಸುಟ್ಟು ಭಸ್ಮವಾಗುತ್ತಿರುವುದು ಮಾತ್ರ ವಿಷಾದದ ಸಂಗತಿ. 


ಸಂಬಂಧಿತ ಟ್ಯಾಗ್ಗಳು

ಕ್ಯಾಲಿಫೋರ್ನಿಯ ಅಮೆರಿಕ Forest camp fire


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ