ಟ್ರಂಪ್ ‘ಮಂಪರು’ ಸಂದೇಶ

Trump is a

16-11-2018

‘ಜಗತ್ತಿನಾದ್ಯಂತ ಮತ್ತು ಅಮೆರಿಕ ದೇಶದಲ್ಲಿ ನೆಲೆಸಿರುವ ಬೌದ್ಧರು, ಸಿಖ್ಖರು ಮತ್ತು ಜೈನರು ಆಚರಿಸುವ ದೀಪಾವಳಿ ಹಬ್ಬದ ಆಚರಣೆಗೆ ಇವತ್ತು ನಾವು ಇಲ್ಲಿ ಸೇರಿದ್ದೇವೆ’ ಎಂಬ ಅಧ್ಯಕ್ಷ ಡೋನಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಸಂದೇಶಕ್ಕೆ ಟ್ವೀಪಲ್ ಗಳು ಅಂದರೆ ಟ್ವಿಟ್ಟರ್ ಬಳಕೆದಾರರು, ಭಾರಿ ಟೀಕೆ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್ ನಲ್ಲಿರುವ ಶ್ವೇತಭವನದಲ್ಲಿ ದೀಪಾವಳಿ ಆಚರಣೆ ವೇಳೆಯ ಟ್ವಿಟ್ಟರ್ ಸಂದೇಶದಲ್ಲಿ, 100 ಕೋಟಿಗೂ ಹೆಚ್ಚಿಗೆ ಇರುವ ಹಿಂದೂ ಸಮುದಾಯವನ್ನು ಉಲ್ಲೇಖಿಸುವುದನ್ನೇ ಮರೆತ, ಟ್ರಂಪ್ ಮರೆಗುಳಿತನ ಅಥವ ಪೆದ್ದತನ ಟ್ವಿಟ್ಟರ್ ಬಳಕೆದಾರರಿಂದ ಭಾರೀ ಗೇಲಿಗೊಳಗಾಗಿದೆ. 

‘ದೀಪಾವಳಿ ಅನ್ನುವುದು ಕತ್ತಲೆಯ ವಿರುದ್ಧ ಬೆಳಕು, ಅಜ್ಞಾನದ ವಿರುದ್ಧ ಜ್ಞಾನ ಮತ್ತು ಕೆಟ್ಟದ್ದರ ವಿರುದ್ಧ ಒಳ್ಳೆಯದರ ಸಾಂಕೇತಿಕ ಗೆಲುವು. ಇದರಜೊತೆಗೆ, ಟ್ರಂಪ್ ಅವರು ಏನೆಲ್ಲಾಆಗಿದ್ದಾರೋ ಅದೆಲ್ಲದಕ್ಕೆ ಪ್ರತಿಯಾಗಿರುವಂಥದ್ದು’. ಅನ್ನುವುದು, ಟ್ರಂಪ್ ಅವರ ಟ್ವೀಟ್ ಬಗ್ಗೆ ಬಂದ ಒಂದು ಪ್ರತಿಕ್ರಿಯೆ. ದೀಪಾವಳಿಯಲ್ಲಿ ಹಿಂದೂ ಸಮುದಾಯವನ್ನೇ ಮರೆತ ಟ್ರಂಪ್ ಅವರ ಮಂಕುತನದ ಬಗ್ಗೆ ವ್ಯಕ್ತವಾದ ಟೀಕೆಗಳಿಗೆ ಶ್ವೇತಭವನದಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.


ಸಂಬಂಧಿತ ಟ್ಯಾಗ್ಗಳು

ಟ್ರಂಪ್ ದೀಪಾವಳಿ Tuppels Washington


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ