ಮೋದಿ ಸರ್ಕಾರಕ್ಕೆ ಚಳಿಬಿಡಿಸಲಿರುವ ಅಧಿವೇಶನ!

Narendra Modi to hold talks with Modi

16-11-2018

ಇದೇ ಡಿಸೆಂಬರ್ 11ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಅದೇದಿನ ಪ್ರಕಟವಾಗಲಿದೆ.  ಹೀಗಾಗಿ, ಸುಮಾರು ಒಂದು ತಿಂಗಳ ಕಾಲ ನಡೆಯಲಿರುವ ಅಧಿವೇಶನದ ಆರಂಭದಿಂದ ದಿನವೇ ಮೋದಿ ಸರ್ಕಾರಕ್ಕೆ ಬಿಸಿ ತಾಕುವ ಸಾಧ್ಯತೆಗಳಿವೆ. 2019ರ ಲೋಕಸಭಾ ಚುನಾವಣೆಗೆ ಮುನ್ನ ನಡೆಯಲಿರುವ ಕಡೆಯ ಪೂರ್ಣಪ್ರಮಾಣದ ಅಧಿವೇಶನದ ಮೇಲೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಡ, ತೆಲಂಗಾಣ ಮತ್ತು ಮಿಜೋರಾಮ್ ರಾಜ್ಯಗಳ ಚುನಾವಣಾ ಫಲಿತಾಂಶದ ನೆರಳು ದಟ್ಟವಾಗಿ ಕವಿಯುವುದರಲ್ಲಿ ಅನುಮಾನವಿಲ್ಲ. ಈ ಅಧಿವೇಶನದಲ್ಲಿ ಕೇಂದ್ರ ಸರ್ಕಾರ, ತ್ರಿವಳಿ ತಲಾಖ್ ಬಗ್ಗೆ ರೂಪಿಸಿರುವ ಮಸೂದೆಗೆ ಅಂಗೀಕಾರ ಪಡೆಯುವ ಪ್ರಯತ್ನ ನಡೆಸಲಿದೆ. ಒಮ್ಮಿಂದೊಮ್ಮೆಗೆ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತ್ನಿಯನ್ನು ದೂರ ಮಾಡುವ ಸಂಪ್ರದಾಯವನ್ನು ದಂಡನಾರ್ಹ ಅಪರಾಧ ಎಂದು ಪರಿಗಣಿಸುವ ಸಂಬಂಧ ವಿಧೇಯಕವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 

ಇದರಜೊತೆಗೆ, ಭಾರತೀಯ ಮೆಡಿಕಲ್ ಕೌನ್ಸಿಲ್ ಗೆ ಸಂಬಂಧಿಸಿದ ತಿದ್ದುಪಡಿ ಮಸೂದೆ ಮತ್ತು ಕಂಪನಿಗಳಿಗೆ ಸಂಬಂಧಿಸಿದ ವಿಧೇಯಕವೂ ಅಂಗೀಕಾರಗೊಳ್ಳುವುದು ಬಾಕಿ ಇದೆ. ಸಾಮಾನ್ಯವಾಗಿ ನವೆಂಬರ್ ನಲ್ಲಿ ಆರಂಭವಾಗುತ್ತಿದ್ದ ಚಳಿಗಾಲದ ಅಧಿವೇಶನವನ್ನು, ಕಳೆದ ವರ್ಷದಿಂದ ಡಿಸೆಂಬರ್ ನಲ್ಲಿ ಆರಂಭಿಸಿ ಜನವರಿಯಲ್ಲಿ ಮುಗಿಸಲಾಗುತ್ತಿದೆ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ