ಕಾಶ್ಮೀರದ ಕನಸು ಕೈಬಿಡಿ

Leave the dream of Kashmir

16-11-2018

ಲಂಡನ್: ತನ್ನ ಸಿಡಿಲಬ್ಬರದ ಬ್ಯಾಟಿಂಗ್ ಜೊತೆಗೆ ಸಿಡಿಗುಂಡಿನಂಥ ಮಾತುಗಳಿಗೂ ಹೆಸರಾಗಿರುವ ಪಾಕ್ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಇಮ್ರಾನ್ ಖಾನ್ ನೇತೃತ್ವದ ಪಾಕ್ ಸರ್ಕಾರಕ್ಕೆ ಪಾಠ ಹೇಳಿದ್ದಾರೆ. ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಶಾಹಿದ್ ಆಫ್ರಿದಿ, ‘ತನ್ನ ಕೈಯ್ಯಲ್ಲಿರುವ 4 ಪ್ರಾಂತ್ಯಗಳನ್ನೇ ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದ ಪಾಕ್ ಸರ್ಕಾರಕ್ಕೆ ಕಾಶ್ಮೀರ ಬೇಕಿಲ್ಲ’ ಎಂದು ಹೇಳಿದ್ದಾರೆ. ಇಷ್ಟಕ್ಕೇ ನಿಲ್ಲಿಸದ ಆಫ್ರಿದಿ, ‘ದೇಶದ ಐಕ್ಯತೆ ಕಾಪಾಡುವಲ್ಲಿ ಮತ್ತು ಉಗ್ರವಾದಿಗಳ ಹಾವಳಿ ತಪ್ಪಿಸುವಲ್ಲಿ ಪಾಕಿಸ್ತಾನ್ ಸರ್ಕಾರ ವಿಫಲವಾಗಿದೆ’ ಎಂದು ಟೀಕಿಸಿದ್ದಾರೆ. ಇಷ್ಟೆಲ್ಲ ಟೀಕೆ ಮಾಡಿದ ಮೇಲೆ, ತಾನು ಪಾರಾಗುವುದು ಹೇಗೆ ಎಂದು ಯೋಚಿಸಿದ ಆಪ್ರಿದಿ, ಭಾರತದ ಮೇಲೂ ಕಿಡಿ ಕಾರಿದ್ದಾರೆ.  ‘ಪಾಕಿಸ್ತಾನಕ್ಕೆ ಕಾಶ್ಮೀರ ಬೇಡ ಎಂದು ಹೇಳಿದರೆ, ಅದು ಭಾರತದ ವಶದಲ್ಲಿರಬೇಕೆಂದಲ್ಲ’ ಎಂದು ರಾಗ ಎಳೆದಿರುವ ಆಫ್ರಿದಿ, ‘ಕಾಶ್ಮೀರ ಒಂದು ಪ್ರತ್ಯೇಕ ದೇಶವಾಗಬೇಕು, ಅಲ್ಲಿನ ನಾಗರಿಕರು ಸಾಯುವುದು ತಪ್ಪಬೇಕು, ಮಾನವೀಯತೆ ಉಳಿಯಬೇಕು’ ಎಂದೆಲ್ಲ ಬಡಬಡಾಯಿಸಿದ್ದಾರೆ.  ಒಟ್ಟಿನಲ್ಲಿ, ‘ಕಾಶ್ಮೀರದ ಆಸೆ ಕೈಬಿಟ್ಟು, ನಿಮ್ಮ ಆಳ್ವಿಕೆಯಲ್ಲಿರುವ ಪ್ರದೇಶವನ್ನು ಸರಿಯಾಗಿ ನಿಭಾಯಿಸಿ’ ಎಂಬ ಆಫ್ರಿದಿಯ ಮಾತುಗಳು, ಪಾಕ್ ಸರ್ಕಾರಕ್ಕೆ ಮತ್ತು ಅಲ್ಲಿನ ಸೇನೆಗೆ ಸಾಕಷ್ಟು ಮುಜುಗರ ಉಂಟುಮಾಡಿರುವುದಂತೂ ಸತ್ಯ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ