ಥಗ್ಸ್ ಆಫ್ ಹಿಂದೋಸ್ತಾನ್

Thugs Of Hindostan

09-11-2018

ಥಗ್ಸ್ ಆಫ್ ಹಿಂದೋಸ್ತಾನ್ (Thugs of Hindostan) ಅಂತ ಹೆಸರಿಟ್ಟುಕೊಂಡು ಒಂದು ಸಿನೆಮಾ ನಿರ್ಮಾಣವಾಗುತ್ತಿದೆ ಅಂತ ಸುದ್ದಿ ಬಂದಾಗಲೇ ಅನೇಕರು  ಈ ಯೋಜನೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದರು. ಅನೇಕ ಸಾಮಾನ್ಯ ಭಾರತೀಯರಿಗೆ ಥಗ್ಸ್ ಎನ್ನುವ ಪದದ ಅರ್ಥವೇ  ಸರಿಯಾಗಿ ಗೊತ್ತಿರಲಿಕ್ಕಿಲ್ಲ. ನಿನ್ನೆ ಬಿಡುಗಡೆಯಾದ ಈ ಚಿತ್ರ ವಿಶ್ವದಾದ್ಯಂತ ಸುಮಾರು 7000 ಪರದೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಮಾದ ತಾರಾಗಣ ನೋಡಿದರೆ ದಂಗಾಗಿಬಿಡುತ್ತೀರಿ. ಅಮಿತಾಭ್ ಬಚ್ಚನ್, ಆಮಿರ್ ಖಾನ್, ಖತ್ರೀನ ಖೈಫ್ ಒಳಗೊಂಡು ಫಾತಿಮಾ ಶೈಖ್, ರೋನಿತ್ ರಾಯ್ ಸೇರಿದಂತೆ ಈ ಸಿನಮಾ ಪ್ರಖ್ಯಾತ ನಟರ ಒಡ್ಡೋಲಗದಂತಿದೆ. ಅದರಲ್ಲೂ ಅಮಿತಾಭ್ ಮತ್ತು ಆಮಿರ್ ಇದ್ದ ಮೇಲೆ ಈ ಸಿನಮಾದ ಮೇಲೆ ನಿರೀಕ್ಷೆಗಳೂ ಹೆಚ್ಛೇ ಇದ್ದವು. ಬಿಡುಗಡೆಯಾದ ಥಗ್ಸ್ ಆಫ್ ಹಿಂದೋಸ್ತಾನ್ ನೋಡಿದ ವಿಮರ್ಶಕರು ನೀಡಿರುವ ವಿಮರ್ಶೆ ಈ ಸಿನಮ ಯಾವ ಮಟ್ಟದ್ದಾಗಿದೆ ಎಂದು ತೋರಿಸುತ್ತಿದೆ.  

ಈ ಸಿನಮಾದ ಇಷ್ಟವಾಗುವ ಅಂಶಗಳು ಯಾವುವೆಂದರೆ ಅವುಗಳನ್ನು ಸುಲಭವಾಗಿ ಗುರುತಿಸಬಹುದು.  ಉನ್ನತಮಟ್ಟದ ವಸ್ತ್ರವಿನ್ಯಾಸ, ಮನಮೋಹಕ ಛಾಯಾಗ್ರಹಣ, ಉನ್ನತ ದರ್ಜೆಯ ನಿರ್ಮಾಣ, ದಂಗಾಗಿಸುವ ಸೆಟ್ ಗಳು ಮತ್ತು ಲೊಕೇಶನ್ ಗಳು ಮತ್ತು ಅದ್ಭುತ ಹಿನ್ನೆಲೆ ಸಂಗೀತ. ಇವಿಷ್ಟೆ ಪ್ರಶಂಸನೀಯ ಅಂಶಗಳು. ಇನ್ನೆಲ್ಲವೂ ತಲೆನೋವು ಕೊಡುವ ಅಂಶಗಳೇ. ತಲೆಬುಡವಿಲ್ಲದ ಕತೆ, ಕಳಪೆ ಚಿತ್ರಕಥೆ, ಕೆಟ್ಟದಾಗಿ ಬರೆಯಲಾದ ಸಂಭಾಷಣೆ, ನೀರಸ ನಿರ್ದೇಶನ, ಗೊತ್ತುಗುರಿಯಿಲ್ಲದ ಕಥಾಹಂದರ, ಮಧ್ಯಮ ಗುಣಮಟ್ಟದ್ದಾಗಿ ಆರಂಭವಾಗಿ ಕೆಳ ಮಟ್ಟಕ್ಕೆ ಇಳಿಯುವ ಸಿನಮಾ, ತಲೆ ನೋವು ಕೊಡುವ ಹಾಡುಗಳು, ಯಾವ ಭಾವನೆಯನ್ನೂ ಉಕ್ಕಿಸದ ಸಿನಮಾದ ಧಾಟಿ, ಅಮಿತಾಭ್ ಬಚ್ಚನ್ ರ ಬೋರ್ ಹೊಡೆಸುವ ಅಭಿನಯ ಬೇಸರ ತರಿಸುವ ಆಮಿರ್ ಅಭಿನಯ, ನೃತ್ಯ ಬಿಟ್ಟರೆ ಇನ್ನೇನೂ ಗೊತ್ತಿಲ್ಲ ಎನ್ನುವಂತೆ ನಟಿಸಿರುವ ಕತ್ರೀನ, ಸಿನೆಮಾದಲ್ಲಿ ನಟಿಸಲು ಅರ್ಹಳೇ ಅಲ್ಲ ಎನ್ನುವಂತೆ ನಟಿಸಿರುವ ಫಾತಿಮಾ ಶೈಖ್, ಮನ ಮುಟ್ಟದ ಸ್ಪೆಷಲ್ ಇಫೆಕ್ಟ್ಸ್, ಪ್ರಯೋಜನವಿಲ್ಲದ ಸಂಕಲನ ಮತ್ತು ಸತ್ವವಿಲ್ಲದ ಡೋಂಗಿ  ಪ್ರಯತ್ನದಂತೆ ಕಂಡುಬರುವ ಸಿನಮಾದ ಓಟ ಇವೆಲ್ಲ ಸೇರಿ ಥಗ್ಸ್ ಆ ಹಿಂದೋಸ್ತಾನ್ ಒಂದು ರೀತಿಯಲ್ಲಿ ಜನರಿಗೆ ಮಾಡಿದ ಮೋಸದ ರೀತಿ ಕಾಣುತ್ತದೆ. ಅದೂ ನೋಟ್ ಅಮಾನ್ಯಗೊಂಡ ನವೆಂಬರ್ 8 ರಂದೇ ಈ ಥಗ್ಸ್ ಆ ಹಿಂದೋಸ್ತಾನ್ ಕೂಡ ಬಿಡುಗಡೆಯಾಗಿದ್ದು ಕಾಕತಾಳೀಯವಷ್ಟೆ. 

ಸುಮಾರು 300 ಕೋಟಿಯಷ್ಟು ಖರ್ಚು ಮಾಡಿ ತಯಾರಾದ ಈ ಸಿನಮಾ ಈಗಾಗಲೇ ಬಹುತೇಕ ಹಣವನ್ನು ಹಕ್ಕು ಮಾರಾಟದ ಮೂಲಕ ಗಳಿಸಿಬಿಟ್ಟಿದೆ ಇನ್ನು ಮೊದಲನೇ ವಾರದಲ್ಲೇ ಸಾಕಷ್ಟು ಸಂಪಾದಿಸಿಬಿಟ್ಟರೆ ನಿರ್ಮಾಪಕನಂತೂ ಬಚಾವ್ ಆದಂತೆಯೇ. ಆದರೆ ಪ್ರೇಕ್ಷಕರ ಪರಿಸ್ಥಿತಿಯನ್ನು ಕೇಳುವವರಾರು ಎನ್ನುವುದೇ ಈಗ ಉಳಿದಿರುವ ಪ್ರಶ್ನೆಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ