ಜಮಖಂಡಿಯಲ್ಲಿ ಬಿಜೆಪಿಗೆ ಸೋಲು!

BJP fails in Jamkhandi

01-11-2018

ಜಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಬಗ್ಗೆ ಬಿಜೆಪಿಯಲ್ಲಿಯೇ ಗೊಂದಲವಿದೆ. ಜಾತಿ ಕೂಪದಲ್ಲಿ ಸಿಕ್ಕಿ ಹಾಕಿಕೊಂಡಿರುವ ಬಿಜೆಪಿಗೆ ಇತ್ತ ಕಾರ್ಯಕರ್ತರೂ ಬೇಕು ಅತ್ತ ಹಣ ಮತ್ತು ಜಾತಿಯೂ ಬೇಕು. ಕಾರ್ಯಕರ್ತರನ್ನು ಕಡೆಗಣಿಸಿದರೆ ಜಾತಿ ಮತ್ತು ಹಣ ಬೆಂಬಲವಿಲ್ಲದಂತಾಗುತ್ತದೆ, ಜಾತಿ ಮತ್ತು ಹಣ ಕಡೆಗಣಿಸಿದರೆ ಕಾರ್ಯಕರ್ತನ್ನು ದೂರ ಮಾಡಿದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ.

ನಿರಾಣಿ ಸಹೋದರನಿಗೆ ಟಿಕೆಟ್ ನೀಡಲು ಬಹುತೇಕ ನಿರ್ಧರಿಸಿದ್ದ ಯಡಿಯೂರಪ್ಪ ಕೊನೆಗೆ ಪಕ್ಷದ ಆರ್ ಎಸ್  ಎಸ್  ಮೂಲದ ನಾಯಕರ ಒತ್ತಡಕ್ಕೆ ಮಣಿಯಬೇಕಾಗಿ ಬಂದು ಹಣವಿಲ್ಲದ, ಅಷ್ಟೊಂದು ಜನ ಬೆಂಬಲವಿಲ್ಲದ, ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀಕಾಂತ್ ಕುಲಕರ್ಣಿಗೆ ಟಿಕೆಟ್ ನೀಡಬೇಕಾಯಿತು. ಆರಂಭದಲ್ಲಿ ಉತ್ತರ ಕರ್ನಾಟಕ ಭಾಗದ ಅನೇಕ ಬಿಜೆಪಿ ನಾಯಕರು ಈ ನಿರ್ಧಾರದ ವಿರುದ್ಧ ತಿರುಗಿ ಬಿದ್ದರು. ಪ್ರಚಾರಕ್ಕೆ ಹೋಗುವುದಿಲ್ಲವೆಂದೂ ಹಠ ಹಿಡಿದರು, ಆದರೆ ಕೊನೆಗೆ ಎಲ್ಲಾ ಉಪಶಮನವಾಗಿ ತೋರಿಕೆಗಾಗಿ ಆದರೂ ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರಕ್ಕೆ ನಾಯಕರು ಮುಂದೆ ಬಂದಿದ್ದಾರೆ. ಆದರೆ ಬಿಜೆಪಿ ಮತ ಒಡೆದು ಹೋಗಿರುವ ಕಾರಣದಿಂದಾಗಿ ಮತ್ತು ವಿಶೇಷವಾದ ಯಾವುದೇ ವಿಷಯ ಮುಂದಿಡಲು ಸಾಧ್ಯವಿಲ್ಲದ ಕಾರಣದಿಂದಾಗಿ ಜಮಖಂಡಿಯಲ್ಲಿ ಬಿಜೆಪಿ ನಿಸ್ತೇಜವಾಗಿದೆ. ಈಗಾಗಲೇ ಬಿಜೆಪಿ ನಾಯಕರು ಆಸಕ್ತಿ ಕಳೆದುಕೊಂಡಿದ್ದಾರೆ.

ಯಡಿಯೂರಪ್ಪ ಜೊತೆ ಬೇರೆ ನಾಯಕರು ಕಂಡು ಬಂದರೂ ಈ ಚುನಾವಣೆಯಲ್ಲಿ ಅವರದ್ದು ಏಕಾಂಗಿ ಹೋರಾಟ. ಇದನ್ನೆಲ್ಲಾ ನೋಡಿದ ಬಿಜೆಪಿ ಕಾರ್ಯಕರ್ತರು ಜಮಖಂಡಿಯಲ್ಲಿ ಅಂತೂ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಅಷ್ಟು ಸುಲಭವಾಗಿ ಗೆಲ್ಲದಿದ್ದರೂ ಬಿಜೆಪಿಗೆ ಮಾತ್ರ ಗೆಲುವು ಸಾಧ್ಯವಿಲ್ಲ ಎಂದು ಬಹುತೇಕ ಖಾತ್ರಿಯಿಂದ ಹೇಳಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

ಬಿಜೆಪಿ ಯಡಿಯೂರಪ್ಪ Jamkhandi Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ