ಸಾಲಮನ್ನಾಕ್ಕೆ ಬಹುತೇಕ ರೈತರ ಬೆಂಬಲ ಇಲ್ಲ

Debt Consolidation is not supported by most farmers

31-10-2018

ಕಳೆದ ಚುನಾವಣೆಯ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಕರ್ನಾಟಕದಾದ್ಯಂತ ಪ್ರಚಾರಮಾಡುತ್ತಾ ರೈತರ ಬೆಂಬಲ ಪಡೆಯುವ ಕಾರಣದಿಂದಾಗಿ, ಅಧಿಕಾರಕ್ಕೆ ಬಂದರೆ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಕುಮಾರಸ್ವಾಮಿ ಆಶ್ವಾಸನೆಯ ಬಗ್ಗೆ ಕರ್ನಾಟಕದಾದ್ಯಂತ ರೈತರು ಆ ಸಂದರ್ಭದಲ್ಲಿ ಆಸಕ್ತಿ ತೋರಿಸಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮತ್ತು ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ಸಾಲ ಮನ್ನಾ ಪ್ರಸ್ತಾವನೆಗೆ ಬೆಂಬಲ ವ್ಯಕ್ತವಾಗಿತ್ತು. ಕರ್ನಾಟಕದ ಬಹುತೇಕ ರೈತರು ಸಾಲ ಮನ್ನಾವನ್ನು ಗಂಭೀರವಾಗಿ ಪರಿಗಣಿಸದ ಕಾರಣದಿಂದಾಗಿಯೇ ಅದು ಚುನಾವಣೆಯ ಫಲಿತಾಂಶದಲ್ಲಿ ಪ್ರಕಟಗೊಂಡು ಜೆಡಿಎಸ್ ಕೇವಲ 37 ಸ್ಥಾನಗಳಲ್ಲಿ ಮಾತ್ರ ಗೆದ್ದು ತೃಪ್ತಿ ಪಡಬೇಕಾಯಿತು.

ಚುನಾವಣೆ ಮುಗಿದು ಸಮ್ಮಿಶ್ರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಾಗ ಅವರು ಸಾಲಮನ್ನಾದ ಬಗ್ಗೆ ಪುನರುಚ್ಚಿಸಿದರು. ಸಾಲಮನ್ನಾದ ಬಗ್ಗೆ ಆಗಲೂ ಕೂಡ ಬಹಳಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾದವು. ಪ್ರತಿಪಕ್ಷ ಬೆಜೆಪಿಯೂ ಕೂಡ ಸಾಲಮನ್ನಾ ಬೇಗನೇ ಮಾಡುವಂತೆ ಕುಮಾರಸ್ವಾಮಿಯವರನ್ನು ಒತ್ತಾಯಿಸಿತು. ಸರ್ಕಾರ ರಚನೆಯಾಗಿ ಹಲವು ತಿಂಗಳುಗಳು ಕಳೆದರೂ ಇನ್ನೂ ಕೂಡ ಸಾಲಮನ್ನಾ ಮಾಡುವ ಪ್ರಯತ್ನ ನಡೆಯುತ್ತಿದೆಯೇ ವಿನಃ  ಇನ್ನೂ ಸಾಲಮನ್ನಾ ಮಾತ್ರ ಆಗಿಲ್ಲ. ಈ ಮಧ್ಯೆ ಸಾಲಮನ್ನಾದ ಬಗ್ಗೆ ರೈತರಲ್ಲಿ ಯಾವ ರೀತಿಯ ಅಭಿಪ್ರಾಯ ಇದೆ ಎಂಬ ವಿಚಾರದ  ಅಧ್ಯಯನ ನಡೆಸಿದ ಸೂಪರ್‍ಸುಧ್ಧಿಗೆ ಲಭಿಸಿದ ಮಾಹಿತಿಯ ಪ್ರಕಾರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೈತರು ಸಾಲಮನ್ನಾದ ಪರವಾಗಿ ಇಲ್ಲ. ಈ ಸಾಲಮನ್ನಾ ಒಂದು ಅವೈಜ್ಞಾನಿಕ ಕ್ರಮ, ಇದರಿಂದ ಆಗುವ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚು.್ಚ ರೈತರಿಗೆ ಅವಶ್ಯಕತೆ ಇದ್ದಾಗ ಯಾರೂ ಸಾಲ ಕೊಡದಂತೆ ಆಗಿಬಿಡುತ್ತದೆ ಎಂಬ ಆತಂಕ ಅವರದ್ದು. ಈ ಸಾಲಮನ್ನಾ ಮಾಡುವ ಬದಲು ನೀರಾವರಿಗೆ ಒತ್ತು ನೀಡಿ ಸೂಕ್ತ ಬೆಂಬಲ ಬೆಲೆ ಸಿಗುವಂತೆ ಕ್ರಮವನ್ನು ಕೈಗೊಂಡು ಸಾಲಮನ್ನಾಕ್ಕೆ ಮೀಸಲಿಟ್ಟಿರುವ ಹಣದ ಸದುಪಯೋಗ ಮಾಡಿದ್ದರೆ ಒಟ್ಟಾರೆ ಅದರಿಂದ ಎಲ್ಲಾ ರೈತರ ಭವಿಷ್ಯ ಒಳ್ಳೆಯದಾಗುತ್ತಿತ್ತು ಎಂಬ ಅಭಿಪ್ರಾಯ ಬಹುತೇಕ ರೈತರದ್ದು.

ಸಾಲಮನ್ನಾ ದುರುಪಯೋಗ ಪಡಿಸಿಕೊಂಡಿರುವ ರೈತರು ಅನೇಕರು ಈ ಸಾಲಮನ್ನಾದ ಪರವಿದ್ದಾರೆ ಎಂದು ಅನೇಕ ಪ್ರಗತಿಪರ ರೈತರು ಆರೋಪ ಮಾಡಿದ್ದಾರೆ. ಹಾಗೆ ನೋಡಿದರೆ ಮಂಡ್ಯ ಮತ್ತು ಹಾಸನ ಬಿಟ್ಟರೆ ಬೇರೆಲ್ಲಾ ಕಡೆ ರೈತರು ಸಾಲಮನ್ನಾದ ಬಗ್ಗೆ ಉತ್ಸುಕರಾಗಿಲ್ಲ. ಆ ಕಾರಣದಿಂದಲೇ ಕುಮಾರಸ್ವಾಮಿಯವರು ಕೂಡ ಸಾಲಮನ್ನಾದ ಬಗ್ಗೆ  ತರಾತುರಿಯನ್ನು ತೋರಿಸದೆ ಆರಾಮವಾಗಿ ದಿನಕ್ಕೊಂದು ಹೇಳಿಕೆ ನೀಡಿಕೊಂಡು ಒಡಾಡುತ್ತಿದ್ದಾರೆ ಎಂದು ಅವರ ವಿರೋಧಿಗಳು ವ್ಯಾಖ್ಯಾನಿಸುತ್ತಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮಾತನಾಡುವ ವಿಷಯಗಳು ಚುನಾವಣೆಗೆ ಮಾತ್ರ ಸೀಮಿತವಾಗಿದ್ದು ಅದರಿಂದ ಯಾರಿಗೂ ಪ್ರಯೋಜನವಿಲ್ಲವೆಂದು ಕರ್ನಾಟಕದ ಜನತೆ ತೋರಿಸಿಕೊಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಕುಮಾರಸ್ವಾಮಿ ಬೆಜೆಪಿ Debt Consolidation Farmers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಬಹುತೇಕ ಜಿಲ್ಲೆಯ ಜನರ ಆಶಯ ಇದೆ ಅಗಿದೆ... ಸಾಲ ಮನ್ನ ಕೇವಲ ತಾತ್ಕಾಲಿಕ ವಾಗಿದ್ದು... ಸಾಲ ಮನ್ನ ಬದಲು ಪರ್ಯಾಯ ವಾಗಿ... ನೀರಾವರಿ ಯೋಜನೆಯ ಸೌಲಭ್ಯ ಸೂಕ್ತ... ಮತ್ತು ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆದೆ.. ಇ ತರದ ವರದಿಗಳು ಇನ್ನೂ ಹೆಚ್ಚು ಬರಬೇಕು
  • ಪರಶುರಾಮ ಎಸ್ ಎಮ್
  • ಸಿನಿಮಾ ಇಂಡಸ್ಟ್ರಿ