ಯಡಿಯೂರಪ್ಪ ಸಿಎಂ ಆಗುವ ಕನಸಿನಲ್ಲಿ ಕನವರಿಸಿಸುತ್ತಿದ್ದಾರೆ !

Kannada News

03-06-2017

ಮೈಸೂರು : ಕೇಂದ್ರ ಸರ್ಕಾರದಿಂದ ಇದುವರೆಗೆ ಒಂದು ರೂಪಾಯಿ ಕೊಟ್ಟಿಲ್ಲ, ಈ ಬಗ್ಗೆ ಯಡಿಯೂರಪ್ಪ ಒಂದು ಮಾತನಾಡಿಲ್ಲ. ಯಡಿಯೂರಪ್ಪ ಸಿಎಂ ಆಗುವ ಕನಸಿನಲ್ಲಿ ಕನವರಿಸಿಸುತಿದ್ದಾರೆ. ಯಡಿಯೂರಪ್ಪ ಭ್ರಮೆಯಲ್ಲಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಅವರು. ಪ್ರಕರಣದ ಬಗ್ಗೆ ತನಿಖೆ ಮಾಡಲು ಹೇಳಿದ್ದೇನೆ. ಕುರ್ಚಿ ಸ್ಟ್ರೆಚರ್ ಇರಲಿಲ್ಲವಾ ? ಘಟನೆಗೆ ನಿಖರ ಕಾರಣ ಏನು ಇದರ ಬಗ್ಗೆ ತನಿಖೆ ನಡೆಸಲು ಡಿ.ಎಚ್.ಓಗೆ ಆದೇಶ ಮಾಡಿದ್ದೇನೆ. ಡಿ.ಎಚ್.ಓ ವರದಿ ನೀಡಿದ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದ ಅವರು. ಟಿವಿಯಲ್ಲಿ ಬರುವದಕ್ಕೆಲ್ಲಾ  ಕ್ರಮ ತೆಗದುಕೊಳ್ಳಲು ಆಗುವುದಿಲ್ಲ. ಕೆಲ ಟಿವಿಗಳಲ್ಲಿ ಸುಳ್ಳು ವರದಿ ಬರುತ್ತದೆ. ಅದಕ್ಕೆಲ್ಲ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ದಾಖಲೆ ಇದ್ದರೆ ಕೊಡಿ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪು ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದರು. ಸಚಿವ ಎಂ.ಬಿ ಪಾಟೀಲ್ ಮಳೆಗಾಗಿ ಪೂಜೆ ವಿಚಾರ. ಅದು ಅವರ ವೈಯಕ್ತಿಕ ವಿಚಾರ, ವೈಯಕ್ತಿಕ ನಂಬಿಕೆ ಅವರವರಿಗೆ ಬಿಟ್ಟಿದ್ದು ಎಂದಿದ್ದಾರೆ, ಇನ್ನು ಬಿಜೆಪಿಯಿಂದ ವಿಧಾನಮಂಡಲದ ಅಧಿವೇಶನ ನಡೆಯುವಾಗ ರೈತರೊಂದಿಗೆ ಬೆಂಗಳೂರಿನಲ್ಲಿ ಸಮಾವೇಶ ನಡೆಸುವ ವಿಚಾರದ ಬಗ್ಗೆ ಮಾತನಾಡಿದ ಅವರು. ಯಡಿಯೂರಪ್ಪ ಬಾಯಿಗೆ ಬಂದಂತೆ ಏನೇನೋ ಹೇಳುತ್ತಾರೆ. ಹೇಳಿದಂಗೆಲ್ಲಾ ಮಾಡೋಕಾಗುತ್ತಾ? ಕೇಂದ್ರ ಸರ್ಕಾರ ಸಾಲ‌ ಮನ್ನಾ ಮಾಡಿದ ತಕ್ಷಣ ನಾನು ಮಾಡ್ತೀನ, ಅಮೀತ್ ಷಾ ಬಂದು ಕೇಂದ್ರದಿಂದ ಸಾಲ ಮನ್ನಾ ಮಾಡುವ ಬಗ್ಗೆ ಮಾತನಾಡಲಿ. ಈ ಬಗ್ಗೆ ಯಡಿಯೂರಪ್ಪ ಜನರ ಮುಂದೆ ಭರವಸೆ ನೀಡಲಿ. ಆಗ ನಾನು ಅವರ ಮಾತು ನಂಬುತ್ತೇನೆ ಎಂದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ