ಎತ್ತರವಿದ್ದೇನೆ ಎಂದು ಹೆಮ್ಮೆ ಪಡುತ್ತಿದ್ದೀರಾ? ಎಚ್ಚರ!!

Proud to be tall Wake up !!

28-10-2018

ಕುಳ್ಳರನ್ನು ಕಂಡರೆ ತಮಾಷೆ ಮಾಡುತ್ತೀರಾ? ನಾನು ಎತ್ತರ ಇದ್ದೀನಿ ಅಂತ ಹೆಮ್ಮೆಯಿಂದ ಬೀಗುತ್ತೀರಾ? ಹಾಗಿದ್ದರೆ ನಿಮಗೊಂದು ಶಾಕಿಂಗ್ ಸುದ್ದಿ. ಇಂಗ್ಲೆಂಡಿನ ರಾಯಲ್ ಸೊಸೈಟಿ ಪ್ರಕಟಿಸಿದ ವರದಿಯ ಪ್ರಕಾರ ದೇಹದಲ್ಲಿ ಕ್ಯಾನ್ಸರ್ ಉತ್ಪತ್ತಿಯಾಗಲು ಇರುವ ಅನೇಕ ಕಾರಣಗಳ ಪೈಕಿ ದೊಡ್ಡ ದೇಹವೂ ಒಂದು. ದೇಹದಲ್ಲಿ ಸಹಜವಾಗಿಯೇ ಕ್ಯಾನ್ಸರ್ ಸೆಲ್ ಗಳಿರುತ್ತವೆ ಆದರೆ ಕುಳ್ಳಗಿರುವವರ ದೇಹದಲ್ಲಿ ಅವರ ದೇಹದ ಗಾತ್ರಕ್ಕೆ ತಕ್ಕಂತೆ ಕಡಿಮೆ ಕ್ಯಾನ್ಸರ್ ಕೋಶಗಳಿರುತ್ತವೆ. ದೇಹದ ಗಾತ್ರ ಹೆಚ್ಚಾದಂತೆಲ್ಲ ಕ್ಯಾನ್ಸರ್ ಬರಲು ಕಾರಣವಾಗುವ ಮೆಲನೋಸಯ್ಟ್ ಜೀವಕೋಶಗಳು ಹೆಚ್ಚಿನ ಸಂಖ್ಯೆಯಲ್ಲಿರುತ್ತವೆ. ಹೀಗಾಗಿ ಎತ್ತರ ಹೆಚ್ಚಿದ್ದವರು ಕ್ಯಾನ್ಸರ್ ಕಾಯಿಲೆಗೆ ಸಂಭವನೀಯ ಅಭ್ಯರ್ಥಿಗಳಾಗಿರುತ್ತಾರೆ ಎಂದು ವರದಿ ಹೇಳಿದೆ. ಸರಾಸರಿ ಎತ್ತರಕ್ಕಿಂತ ಪ್ರತೀ ನಾಲ್ಕು ಇಂಚು ಹೆಚ್ಚು ಎತ್ತರಕ್ಕೆ ಕ್ಯಾನ್ಸರಿನ ಸಾಧ್ಯತೆ ಶೇಖಡ ಹತ್ತರಷ್ಟು ಹೆಚ್ಚಾಗುತ್ತಾ ಹೋಗುತ್ತದೆ ಎಂದು ಸಂಶೋದನೆ ಮಾಡಿದ ತಜ್ಞರು ಹೇಳಿದ್ದಾರೆ.

ಇದು ಬಹಳ ದೊಡ್ಡ ಕಾರಣವಲ್ಲದಿದ್ದರೂ ಇದು ಖಂಡಿತವಾಗಿಯೂ ಒಂದು ಕಾರಣ ಎಂದು ಹೇಳಲಾಗಿದೆ. ಧೂಮಪಾನ ಚಟ ಮುಂತಾದ ಕಾರಣಗಳಿಗೆ ಹೋಲಿಸಿದರೆ ದೇಹದ ಎತ್ತರ ಸಣ್ಣ ಕಾರಣವಾಗಿರಬಹುದು ಆದರೆ ಅದೂ ಒಂದು ಕಾರಣ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ಕುಳ್ಳಗಿರುವ ವ್ಯಕ್ತಿಗಳಿಗಿಂತ ಎತ್ತರಕ್ಕಿರುವ ವ್ಯಕಿಗಳು ಕ್ಯಾನ್ಸರ್ಗೆ ತುತ್ತಾಗಿರುವುದು ಸಾಬೀತಾಗಿದೆ. ಈ ವರದಿಯ ಬಗ್ಗೆ ತಕರಾರುಗಳಿದ್ದರೂ ತಾರ್ಕಿಕವಾಗಿ ನೋಡಿದರೆ ವರದಿಯಲ್ಲಿರುವ ಅಂಶಗಳನ್ನು ನಂಬಬಹುದು ಎಂದು ತಜ್ಞರು ಹೇಳಿದ್ದಾರೆ.

ಎತ್ತರವಿದ್ದೇನೆಂದು ಬೀಗುವವರು, ಎತ್ತರವಾಗಬೇಕೆಂದು ಹಂಬಲಿಸುವವರು ಇನ್ನೊಮ್ಮೆ ಯೋಚಿಸಿದರೆ ಉತ್ತಮ ಎನ್ನಬಹುದಲ್ಲವೇ!


ಸಂಬಂಧಿತ ಟ್ಯಾಗ್ಗಳು

Tall Cancer ಧೂಮಪಾನ ಚಟ ಹೆಮ್ಮೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ