ಅಳುಮುಂಜಿ ಕುಮಾರಸ್ವಾಮಿ

Alumunji Kumaraswamy

13-10-2018

ವೋಟು ಗಿಟ್ಟಿಸಿಕೊಳ್ಳುವುದಕ್ಕಾಗಿ ರಾಜಕಾರಣಿಗಳು ಅಳುವುದು ಸಹಜ, ಆದರೆ ಗೆದ್ದು ಮುಖ್ಯಮಂತ್ರಿಯಾದ ಮೇಲೂ ಅಳುವ ಸಾಧನೆ ಮಾಡಿರುವವರು ಹೆಚ್ ಡಿ ಕುಮಾರಸ್ವಾಮಿ. ಚುನಾವಣೆಗೆ ಮೊದಲೇ ತಮ್ಮ ಅನಾರೋಗ್ಯವನ್ನು ಮುಂದಿಟ್ಟುಕೊಂಡು ಜನರ ಮುಂದೆ ಅತ್ತು ವೋಟ್ ಕೇಳಿದ್ದ ಕುಮಾರಸ್ವಾಮಿ, ಮುಖ್ಯಮಂತ್ರಿಯಾದ ಮೇಲೂ ಅವಕಾಶ ಸಿಕ್ಕಾಗಲೆಲ್ಲ ಅಳುತ್ತಿರುತ್ತಾರೆ. 

ಕುಮಾರಸ್ವಾಮಿ ಅಳುವುದು ತಮ್ಮ ಅಸಹಾಯಕತೆಯ ಕಾರಣದಿಂದಲೋ, ಇಲ್ಲ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗುತ್ತಿಲ್ಲವೆಂದೋ, ಇಲ್ಲ ಭಾವಪರವಶರಾಗಿಯೋ ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದರೆ ಈಗ ಸಿಕ್ಕ ಅವಕಾಶದಲ್ಲಿ ಜನರನ್ನು ದಿಕ್ಕು ತಪ್ಪಿಸುತ್ತಾ ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗದಿರುವ ತಮ್ಮ ತಪ್ಪಿಗೆ ಬೇರೆಯವರ ಮೇಲೆ ಗೂಬೆ ಕೂರಿಸುತ್ತಾ ರಾಜ್ಯಭಾರ ಮಾಡುತ್ತಿರುವ ಕುಮಾರಸ್ವಾಮಿಯವರಿಗೆ ಇನ್ನು ಕೆಲವು ದಿನಗಳಲ್ಲೇ ಜನರಿಗೆ ಸತ್ಯವನ್ನು ಹೇಳಬೇಕಾಗಿ ಬರಬೇಕಾಗುತ್ತದೆ ಎಂಬುದು ತಿಳಿದಿದೆ. ಆ ದಿನ ಬರುವ ಮೊದಲೇ ತಮ್ಮ ಸರ್ಕಾರ ಬಿದ್ದು ಹೋದರೆ ಅದು ಒಂದು ದೊಡ್ಡ ಸಬೂಬಾಗಿ ಇನ್ನೂ ಹೆಚ್ಚು ಅತ್ತುಕೊಂಡು ಜನರಿಂದ ಸಹನಾಭೂತಿ ಗಿಟ್ಟಿಸಬಹುದು ಎಂಬುದು ಅವರ ಲೆಕ್ಕಾಚಾರವಾಗಿರಬಹುದು. ಆದರೆ ಸರ್ಕಾರ ಹೀಗೆ ಉಳಿದುಕೊಂಡು ಇನ್ನು ಕೆಲವು ದಿನಗಳಲ್ಲೇ ಜನ ಸಾಲಮನ್ನಾ ಮತ್ತಿತರ ಆಶ್ವಾಸನೆಗಳ ಬಗ್ಗೆ ಪ್ರಶ್ನಿಸತೊಡಗಿದರೆ ಏನು ಮಾಡುವುದು ಎಂಬುದನ್ನೂ ಯೋಚಿಸಿಯೇ ಈಗಲೇ ಅವರು ಅಳುವುದಕ್ಕೆ ಶುರುವಿಟ್ಟುಕೊಂಡಿದ್ದಾರೆಯೇ ಎಂದು ಬಿಜೆಪಿಯವರು ಅನುಮಾನಿಸುತ್ತಿದ್ದರೆ. 

ಅದೇನಿದ್ದರೂ ಈ ಅಳುವ ಜಾಯಮಾನ ಗೌರವ ತರುವಂಥಾದ್ದಲ್ಲ ಮತ್ತು ಅಷ್ಟು ದಯನೀಯ ಸ್ಥಿತಿಯಲ್ಲಿ ಹುದ್ದೆಯನ್ನು ನಿಭಾಯಿಸುವ ಅವಶ್ಯಕತೆಯಿಲ್ಲ ಎಂದು ಹೇಳುತ್ತಿದ್ದಾರೆ ಅನೇಕ ರಾಜಕೀಯ ವಿಶ್ಲೇಷಕರು. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ