ಕನ್ನಡ ಟಿವಿ ಚಾನಲ್ ಗಳಲ್ಲಿ ಬದಲಾವಣೆಯ ಹವಾ!

Climate change on Kannada TV channels!

08-10-2018

ಟಿವಿ ಕ್ಷೇತ್ರ ಭಾರತದಲ್ಲಂತೂ ಎಲ್ಲಾ ಧರ್ಮ, ಜಾತಿ ಮತ್ತು ಪಂಗಡಗಳನ್ನು ಪ್ರತಿನಿಧಿಸುವುದಿಲ್ಲ ಎಂಬ ಆರೋಪ ಹಿಂದಿನಿಂದಲೂ ಇದೆ. ಬಹಳ ಕಾಲ ಈ ಆರೋಪ ಸಿನಮಾದ ಮೇಲೂ ಇತ್ತು, ಆದರೆ ಹಿಂದಿ ಸಿನಮಾ ಕ್ಷೇತ್ರದಲ್ಲಿ ಮುಸಲ್ಮಾನ ಸಮುದಾಯದ ನಟ ನಟಿಯರು ಪ್ರಖ್ಯಾತರಾದಾಗ ಆ ಆರೋಪ ನಿಂತು ಹೋಯಿತು. ಕನ್ನಡ ಸಿನಮಾ ಮತ್ತು ಟಿವಿ ಕ್ಷೇತ್ರಗಳಲ್ಲಿ ಪ್ರತಿನಿಧಿತ್ವ ಇಲ್ಲ. ಇಲ್ಲಿ ಮುಸಲ್ಮಾನರನ್ನ ಅಥವಾ ಕ್ರೈಸ್ತರನ್ನು ಬಳಸಿಕೊಳ್ಳುವುದೇ ಕಡಿಮೆ. ಹಾಗೊಮ್ಮೆ ಅವರಿಗೆ ಅವಕಾಶ ನೀಡಿದರೂ ಅದೆಲ್ಲಾ ಸಣ್ಣ ಪುಟ್ಟ ಪಾತ್ರಗಳಿಗಾಗಿ ಮಾತ್ರ ಎಂಬ ಆರೋಪ ಈಗಲೂ ಇದೆ. ಆದರೆ ಟಿವಿ ೯ ನಲ್ಲಿ ಹೆಸರು ಮಾಡಿದ ರೆಹಮಾನ್ ಅವರಿಗೆ ಮನರಂಜನೆ ಟಿವಿ ಗೀಳು ಹಿಡಿದು ಅವರು ಬಿಗ್ ಬಾಸ್ ನಂತರ ಧಾರಾವಾಹಿ ಮತ್ತು ಇತರೆ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಮುಂದಾಗಿದ್ದು ಎಲ್ಲರಿಗೂ ತಿಳಿದ ವಿಷಯ. ಆದರೂ ಅವರಿಗೆ ಅಷ್ಟೇನೂ ಯಶಸ್ಸು ಬರಲಿಲ್ಲ. ಆದರೆ ಈಗ ಸ್ಟಾರ್ ಸುವರ್ಣ ವಾಹಿನಿಯ ಕೃಷ್ಣ ತುಳಸಿ ಎಂಬ ಧಾರಾವಾಹಿಯಲ್ಲಿ ರೆಹಮಾನ್ ಒಂದು ಪ್ರಮುಖ ಪಾತ್ರ ಪಡೆದಿರುವುದು ಟಿವಿ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರಬಹುದೆಂಬ ಅಭಿಪ್ರಾಯಕ್ಕೆ ಕಾರಣವಾಗಿದೆ. 

ಕೃಷ್ಣ ತುಳಸಿ ಒಂದು ಕಳಪೆ ಧಾರಾವಾಹಿಯಾಗಿದ್ದರೂ ಅದರಲ್ಲಿ ರೆಹಮಾನ್ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದಿದೆ. ಸೀರಿಯಲ್ ಶುರುವಾಗುವ ಮೊದಲೇ ಪ್ರೋಮೋಗಳಲ್ಲೂ ರೆಹಮಾನ್ ಅನ್ನು ತೋರಿಸಿ ಅವರಿಗೆ ಪ್ರಾಮುಖ್ಯತೆ ನೀಡಲಾಗಿತ್ತು. ಇದೊಂದು ಧನಾತ್ಮಕ ಪ್ರಯತ್ನ. ಇದರಿಂದ ಮುಸ್ಲಿಂ ಸಮುದಾಯದ ಜನರರು ಈ ಕನ್ನಡ ಟಿವಿ ಚಾನಲ್ಗಳು ನಮ್ಮದೂ ಕೂಡ ಎಂಬ ಅಭಿಪ್ರಾಯಕ್ಕೆ ಬಂದರೆ ಅದು ಸಮಾಜಕ್ಕೆ ಒಳ್ಳೆಯದು. ಆದರೆ ಅದರೊಂದಿಗೆ ಸೀರಿಯಲ್ಗಳಲ್ಲಿ ಮುಸಲ್ಮಾನ ಅಥವ ಕ್ರೈಸ್ತ ಪಾತ್ರಗಳನ್ನೂ ತೋರಿಸುವಾಗ ಅವರನ್ನು ಟಿವಿ ಮಂದಿಯ ಪೂರ್ವಗ್ರಹಗಳಿಗೆ ತಕ್ಕಂತೆ ಮೆಕ್ಯಾನಿಕ್ ಅಥವಾ ರಿಸೆಪ್ಷನಿಸ್ಟ್  ಆಗಿ ಮಾತ್ರ ತೋರಿಸುವುದನ್ನು ನಿಲ್ಲಿಸಿದರೆ ಆ ಮಾಧ್ಯಮದಲ್ಲಿ ಸ್ವಲ್ಪ ಪ್ರೌಢಿಮೆಯನ್ನು ಕಾಣಬಹುದೇನೊ. ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ