ಕೊಡಗಿಗೆ ಪರಿಹಾರವಿಲ್ಲ, ಮೈಸೂರಿಗೆ ಅದ್ದೂರಿ ದಸರಾ!!

There is no solution to Kodagu, luckily to Mysore !!

06-10-2018

ಮೊದಲು ಸಾಲಮನ್ನಾ ಮಾಡುವ ಹಿನ್ನೆಲೆಯಲ್ಲಿ ಖರ್ಚು ಕಡಿಮೆ ಮಾಡಬೇಕು ಎಂಬ ಸೂಚನೆಯನ್ನು ಇಲಾಖೆಗಳಿಗೆಲ್ಲ ನೀಡಲಾಗಿತ್ತು, ಆನಂತರ ಕೊಡಗಿನಲ್ಲಿ ಮತ್ತು ಇನ್ನೂ ಕೆಲವು ಜಿಲ್ಲೆಗೆಗಳಲ್ಲಿ ಅತಿವೃಷ್ಟಿಯಿಂದಾದ ತೊಂದರೆಯ ಕಾರಣದಿಂದಾಗಿ ಪರಿಹಾರ ಕಾರ್ಯ ನಡೆಸಲು ಹಣ ಬೇಕು ಆ ಕಾರಣದಿಂದ ಹಣ ಉಳಿತಾಯ ಮಾಡಬೇಕು ಎಂದು ಹೇಳಲಾಯಿತು. ಅದರ ಹಿಂದೆಯೇ ದಸರಾ ಬಂದಿದೆ. ಈ ಬಾರಿ ದಸರಾ ಕಾರ್ಯಕ್ರಮವನ್ನು ಅಷ್ಟೊಂದು ಖರ್ಚು ವೆಚ್ಚದೊಂದಿಗೆ ನಡೆಸಲಾಗುವುದಿಲ್ಲ ಎಂದು ಹೇಳಲಾಯಿತು. ಆದರೆ ಕುಮಾರಸ್ವಾಮಿ ಯವರ ಎಲ್ಲಾ ಮಾತುಗಳಂತೆ ಇದು ಕೂಡ ಹುಸಿಯಾಗಿದೆ. ಅತ್ಯಂತ ಅದ್ದೂರಿಯಾಗಿ ದಸರಾ ನಡೆಸಲು ತಯಾರಿ ನಡೆಯುತ್ತಿದೆ.

ಆ ಕಡೆ ಕೊಡಗಿನಲ್ಲಿ ಇನ್ನೂ ಪರಿಹಾರ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಅನೇಕ ಜನ ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ ಇದ್ದಾರೆ. ಅನೇಕರಿಗೆ ದಿಕ್ಕೇ ತೋಚದಂತ ಪರಿಸ್ಥಿತಿ ಎದುರಾಗಿದೆ. ಕೇಂದ್ರದಿಂದ ಇನ್ನೂ ಪರಿಹಾರಕ್ಕೆ ಬೇಕಾದ ಹಣ ಬಂದಿಲ್ಲ. ಇದರ ಮಧ್ಯೆ ಕೊಡಗಿನ ಉಸ್ತುವಾರಿ ಸಚಿವರು ಕೊಡಗಿನ ಕಡೆ ಆಗೊಮ್ಮೆ ಕಣ್ಣು ಹಾಯಿಸುತ್ತ ತಮ್ಮ ಜವಾಬ್ದಾರಿಯನ್ನು ಬಹಳಷ್ಟು ಮರೆತುಬಿಟ್ಟಿದ್ದಾರೆ. ಪ್ರವಾಸಹೋದ್ಯಮ ಸಚಿವರೂ ಆಗಿರುವ ಸಾರಾ ಮಹೇಶ್ ಅವರು ಮೈಸೂರಿನಲ್ಲಿ ದಸರಾ ಉಸ್ತುವಾರಿ ನೋಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ.

ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ಆಯೋಜಿತವಾಗುತ್ತಿದೆ. ದಸರಾ ನಡೆಸುವ ಉಸಾಬರಿಯಲ್ಲಿ ಸರ್ಕಾರ ಕೊಡಗನ್ನು ಮರೆತದ್ದು ಮಾತ್ರವಲ್ಲದೆ ಹಣ ಉಳಿತಾಯ ಮಾಡುವುದನ್ನೂ ಸರ್ಕಾರ ಮರೆತಂತಿದೆ. ಸಾಲ ಬಾಧೆಯಿಂದ ಬಳಲುತ್ತಿರುವ ರೈತರ ಭಾವನೆ ನೀಗುವುದೋ ಇಲ್ಲ ಕೊಡಗಿನ ನಿರಾಶ್ರಿತರ ಹಣೆಬರಹ ಬದಲಾಯಿಸುವುದೋ ಇಲ್ಲ ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ನಡೆಸುವುದೋ, ಯಾವುದು ಹೆಚ್ಚು ಆದ್ಯತೆಯದ್ದು ಎಂಬ ಗೊಂದಲದಲ್ಲಿ ಸರ್ಕಾರ ಸಿಲುಕಿದಂತಿದೆ.

ಯಾರೂ ಮೈಸೂರು ದಸರಾವನ್ನು ಈ ವರ್ಷ ಅದ್ದೂರಿಯಾಗಿ ಮಾಡಲೇ ಬೇಕು ಎಂದು ಸರ್ಕಾರದ ಮುಂದೆ ಬೇಡಿಕೆಯೇನೂ ಇಟ್ಟಿರಲಿಲ್ಲ ಆದರೂ ಇಷ್ಟೊಂದು ಖರ್ಚು ಮಾಡಿ ದಸರಾ ನಡೆಸುವ ಅವಶ್ಯಕತೆ ಸರ್ಕಾರಕ್ಕಿತ್ತೇ ಎಂದು ಮೈಸೂರಿನ ಜನರೂ ಕೇಳುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

ದಸರಾ ಸಾರಾ ಮಹೇಶ್ Kodagu Mysore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ