ಕನ್ನಡಕ್ಕೊಬ್ಬನೇ ಅಕುಲ್ ಬಾಲಾಜಿ !

Akul Balaji in Kannada alone!

30-09-2018

ಮನರಂಜನಾ ಟಿವಿ ಕಾರ್ಯಕ್ರಮಗಳ ಪೈಕಿ ನಾನ್ ಫಿಕ್ಷನ್ ಕಾರ್ಯಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ, ಅವು ಚಾನಲ್ಗೆ ದೊಡ್ಡ ಮಟ್ಟದಲ್ಲಿ ಹಣ ಕೂಡ ಸಂಪಾದಿಸಿ ಕೊಡುತ್ತವೆ. ನಾನ್ ಫಿಕ್ಷನ್ ಕಾರ್ಯಕ್ರಮಗಳ ಪೈಕಿ ಪ್ರಮುಖವಾದುವು ಗ್ರಾಂಡ್ ಫೈನಲೆ ಕಾರ್ಯಕ್ರಮಗಳು, ಸಿನೆಮಾ ಅವಾರ್ಡ್ ಗಳು ಮತ್ತು ಟಿವಿ ಅವಾರ್ಡ್ ಗಳು. ಈ ಕಾರ್ಯಕ್ರಮಗಳೊಂದಿಗೆ ಅನೇಕ ಟಿವಿ ಚಾನಲ್ ಗಳಲ್ಲಿ ವಾರಾಂತ್ಯದ ನಾನ್ ಫಿಕ್ಷನ್ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ. ಬಿಗ್ ಬಾಸ್, ಪ್ಯಾಟೆಹುಡುಗಿ, ಹಳ್ಳಿ ಹೈದ, ಸರಿಗಮಪ, ಕಾಮಿಡಿ ಮುಂತಾದ ಕಾರ್ಯಕ್ರಮಗಳು ಮನರಂಜನಾ ಚಾನಲ್ಗಳ ಅವಿಭಾಜ್ಯ ಅಂಗ ಗಳಾಗಿಬಿಟ್ಟಿವೆ. ಆದರೆ ಈ ಕಾರ್ಯಕ್ರಮಗಳನ್ನು ನಡೆಸಿಕೊಡುವವರು ಅವೇ ಕೆಲವು ನಿರೂಪಕರಾಗಿದ್ದಾರೆ. ಅದೇ ಅಕುಲ್ ಬಾಲಾಜಿ, ಅದೇ ಅನುಶ್ರೀ, ಅದೇ ನಿರಂಜನ್ ದೇಶಪಾಂಡೆ ಮತ್ತು ಅದೇ ಸೃಜನ್. ಕೆಲವೊಮ್ಮೆ ಇನ್ನು ಕೆಲವು ಬೇರೆಯವರು ಬಂದರೂ ಅವರೂ ಕೂಡ ಬಹಳ ದಿನಗಳಿಂದ ಇರುವವರೇ.

ಈ ಮುಖಗಳ ಪೈಕಿ ಜನರಿಗೆ ಅಕುಲ್ ಬಾಲಾಜಿ ಮುಖ ಮತ್ತು ಧ್ವನಿ ಬಹಳ ಪರಿಚಿತ. ಎಷ್ಟು ಪರಿಚಿತವೆಂದರೆ, ಧ್ವನಿ ಕೇಳಿದರೆ ದೂರದಿಂದಲೇ ಅದು ಅಕುಲ್ ನಡೆಸುವ ಕಾರ್ಯಕ್ರಮ ಎಂದು ಹೇಳಬಹುದು. ಕೆಲವೊಮ್ಮೆ ಒಂದೇ ಸಮಯಕ್ಕೆ ಅಕುಲ್ ನಡೆಸಿಕೊಡುವ ಕಾರ್ಯಕ್ರಮ ಬೇರೆ ಬೇರೆ ಚಾನಲ್ಗಳಲ್ಲಿ ಬರುತ್ತಿರುತ್ತದೆ. ಅದೇ ಹಾವ ಭಾವ, ಅದೇ ಧ್ವನಿ, ಅದೇ ವರ್ತನೆ ಮತ್ತು ಅದೇ ಚೇಷ್ಟೆಗಳು.

ಒಂದೇ ಮುಖವನ್ನು ನೋಡುತ್ತಿದ್ದರೆ ಜನರಿಗೆ ವಾಕರಿಕೆ ಬರದಿರಲು ಸಾಧ್ಯವಿಲ್ಲ. ಆದರೂ ಜನರ ಭಾವನೆಗಳಿಗೆ ಅಭಿಪ್ರಾಯಗಳಿಗೆ ಬೆಲೆ ಕೊಡುವ ಜಾಯಮಾನದವರಲ್ಲದ ಟಿವಿ ಮಂದಿ ತಮಗೆ ಅನಿಸಿದ್ದನ್ನೇ ಮಾಡುವುದು ಸಾಮಾನ್ಯ. ಅಕುಲ್ ಕಾರ್ಯಕ್ರಮ ಮಾಡಲಿ, ಅದು ಒಂದು ಮಿತಿಯಲ್ಲಿದ್ದರೆ ಒಳ್ಳೆಯದು, ಆದರೆ ಕನ್ನಡಿಗರಲ್ಲಿ ನಿರೂಪಣೆ ಮಾಡುವ ಪ್ರತಿಭೆ ಇರುವ ಇನ್ಯಾರೂ ಇಲ್ಲವೇ ಎಂಬ ಪ್ರಶ್ನೆ ಜನರ ಮನದಲ್ಲಿ ಉದ್ಭವ ವಾಗುತ್ತಿದೆ. ಪ್ರತಿಭೆ ಇಲ್ಲವೋ, ಇವರು ಹುಡುಕಿದವರು ಆ ಎತ್ತರಕ್ಕೆ ಏರಲಿಲ್ಲವೋ ಇಲ್ಲ ಇವರು ಅಂತ ಸಾಮರ್ಥ್ಯ ಇರುವವರನ್ನು ಹುಡುಕುವ ಪ್ರಯತ್ನ ಮಾಡಿಲ್ಲವೋ ಗೊತ್ತಿಲ್ಲ.

ಹಾಗೆ ನೋಡಿದರೆ ಹೊಸ ಪ್ರತಿಭೆಗಳನ್ನು ಬೆಳೆಸುವ ಮತ್ತು ಪೋಷಿಸುವ ಮನಸ್ಥಿತಿ ಟಿವಿ ಮಂದಿಯಲ್ಲಿ ಕಂಡು ಬರುವುದಿಲ್ಲ. ಹಾಸ್ಯಕ್ಕೂ ಅಕುಲ್, ದುಃಖಕ್ಕೂ ಅಕುಲ್, ಕಾಮಿಡಿಗೂ ಅಖಿಲ್, ಅವಾರ್ಡ್ ಗೂ ಅಕುಲ್ ಎಂದರೆ ಅದು ಸ್ವಲ್ಪ ವಿಪರೀತವೇ . ಜನ ಬಹಿರಂಗವಾಗಿ ತಮ್ಮ ಅಸಹನೆಯನ್ನು ಹೊರಗೆಡುಹುವ ಮೊದಲು ಟಿವಿ ವ್ಯವಸ್ಥಾಪಕರು ಹೊಸ ಮುಖಗಳನ್ನು ಜನರಿಗೆ ಪರಿಚಯಿಸಿ ಬೆಳೆಸಿದರೆ ಕನ್ನಡದಲ್ಲಿ ಹೊಸ ಪ್ರತಿಭೆಗಳು ಬೆಳೆಯಲು ಸಾಧ್ಯವಾಗುತ್ತದೆ ಮತ್ತು ಜನರಿಗೂ ಹೊಸತು ನೀಡಿದಂತಾಗುತ್ತದೆ. 


ಸಂಬಂಧಿತ ಟ್ಯಾಗ್ಗಳು

Akul Balaji Kannada ಮನರಂಜನಾ ಟಿವಿ TV Shows


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Akul always change another anchor
  • Kpkushs
  • Lab technician
ಮಾಡ್ತಿನಿ
  • ದೇವರಾಜ್
  • ಕೆಲಸ ಇಲ್ಲ
ಹೌದು 100 ಕ್ಕೆ ಸತ್ಯ ನಮ್ಮಂತಹ ಪ್ರತಿಭೆಗೆ ಅವಕಾಶ ಕೊಡಿ..
  • Sukanya Bai s g
  • Teacher