ಸೂಪರ್ ಮಿನಿಟ್ ಗೆಲ್ಲಿಸುತ್ತಾರಾ ಗಣೇಶ್?

Ganesh, who is winning the super minute?

30-09-2018

ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೂಪರ್ ಮಿನಿಟ್ ಗೇಮ್ ಶೋ ಮತ್ತೆ ಆರಂಭವಾಗಿದೆ. ಸ್ವಲ್ಪ ಬದಲಾವಣೆಯೊಂದಿಗೆ ಆರಂಭಗೊಂಡ ಈ ಆವೃತ್ತಿ ಒಂದು ಸಾಧಾರಣ ಕಾರ್ಯಕ್ರಮ. ಕಳೆದ ಬಾರಿ ಪ್ರಸಾರವಾದಾಗ ಈ ಕಾರ್ಯಕ್ರಮಕ್ಕೆ ಅಷ್ಟೇನೂ ಜನ ಸ್ಪಂದನೆ ಸಿಕ್ಕಿರಲಿಲ್ಲ. ಸೆಲಬ್ರಿಟಿಗಳನ್ನು ಹಾಕಿಕೊಂಡು ಮಾಡಿದ್ದಾಗ ಸೂಪರ್ ಮಿನಿಟ್ ಒಂದಷ್ಟು ಜನಪ್ರಿಯತೆಯನ್ನು ಸಂಪಾದಿಸಿತ್ತು.

ಹಾಗೆ ನೋಡಿದರೆ ಈಗ ಗೋಲ್ಡನ್ ಸ್ಟಾರ್ ಗಣೇಶ್ ಗೆ ಅಂಥಾ ತಾರಾ ವರ್ಚಸ್ಸು ಏನೂ ಇಲ್ಲ. ಸಾಲಾಗಿ ತೋಪಾದ ಸಿನೆಮಾಗಳ ಕಾರಣದಿಂದಾಗಿ ಕಲರ್ಸ್ ಚಾನಲ್ ಗಿಂತ ಹೆಚ್ಚಾಗಿ ಗಣೇಶ್ ಗೇ ಈ ಕಾರ್ಯಕ್ರಮದ ಅವಶ್ಯಕತೆ ಹೆಚ್ಚು ಇದೆ. ತನ್ನ ಹಾವ ಭಾವ ಮತ್ತು ಮಾತುಗಳಿಂದ ಜನರನ್ನು ರಂಜಿಸಲು ಪ್ರಯತ್ನಿಸುವ ಗಣೇಶ್ ಈ ಬಾರಿ ಸ್ವಲ್ಪ ಅಹಂ ಅನ್ನು ತೊರೆದಂತಿದೆ ಮತ್ತು ಈ ಕಾರ್ಯಕ್ರಮ ಅವರಿಗೆ ಎಷ್ಟು ಮುಖ್ಯ ಎನ್ನುವುದು ಅವರ ಮಾತಿನಲ್ಲೇ ಕಂಡು ಬರುತ್ತಿದೆ.

ಬಹಳ ಸುಂದರವಾದ ಮತ್ತು ಆಕರ್ಷಣೀಯ ಪ್ರೋಮೋಗಳ ಮೂಲಕ ಪ್ರಚಾರ ನೀಡಿ ಈ ಬಾರಿಯ ಸೂಪರ್ ಮಿನಿಟ್ ಅನ್ನು ಆರಂಭಿಸಿದರೂ ಮೊದಲ ಕಂತಿನಲ್ಲಿಯೇ ಕಾರ್ಯಕ್ರಮ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಅದಲ್ಲದೆ ಗಣೇಶ್ ದಣಿವಾದಂತೆ ಕಂಡುಬರುತ್ತಿದ್ದಾರೆ. ಅವರ  ಮುಖ ಕೂಡ ಬೆವರಿದಂತೆ ಗೋಚರಿಸುತ್ತದೆ. ಅವರ ಮಾತಿನಲ್ಲಿ ಆ ಹಿಂದಿನ ಹುರಪಿಲ್ಲ ಅವರ ನಿರೂಪಣೆಯಲ್ಲಿ ಲವಲವಿಕೆಯಿಲ್ಲ. ಬಹಳ ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ಅದರೊಂದಿಗೆ ಸ್ಪರ್ಧಿಗಳು ಕೂಡ ತಮ್ಮ ಸಾಮಾನ್ಯ ಗೋಳಿನ ಕತೆಗಳನ್ನು ಹೇಳುತ್ತಾ ಅತ್ತು ಕರೆದು ಮಾಡಿದರೂ ಈ ಕಾರ್ಯಕ್ರಮ ಹಿಂದಿನ ಆವೃತ್ತಿಗಳನ್ನು ಹಿಂದಕ್ಕೆ ಹಾಕುವ ಸೂಚನೆಗಳು ಕಾಣುತ್ತಿಲ್ಲ.

ಇದು ಹೀಗೇ ಮುಂದುವರೆದರೆ ಕಲರ್ಸ್ ಕನ್ನಡ ಚಾನಲ್ ಗೆ ಇದು ತಲೆನೋವಾಗುವುದರಲ್ಲಿ ಸಂಶಯವಿಲ್ಲ. ಚಾನಲ್ ನವರು ಈಗಲೇ ಎಚ್ಛೆತ್ತುಕೊಂಡರೆ ಇದು ಇನ್ನೊಂದು ಸೋಲುವ ಕಾರ್ಯಕ್ರಮವಾಗದಂತೆ ನೋಡಿ ಕೊಳ್ಳಬಹುದು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ