ಶಾಸಕರಿಗೆ ಕ್ಯಾರೇ ಎನ್ನದ ಹಾಸನ ಜಿಲ್ಲಾಧಿಕಾರಿ!!

Hassan District Collector of Carrey for MLAs

28-09-2018

ಅಧಿಕಾರಶಾಹಿ ಇರುವುದು ಶಾಸನಗಳನ್ನು ಮತ್ತು ಕಾನೂನನ್ನು ಜಾರಿ ಮಾಡಲಿಕ್ಕೆ ಮತ್ತು ಜನರ ಹಕ್ಕುಗಳನ್ನ ರಕ್ಷಣೆ ಮಾಡಲಿಕ್ಕೆ. ಅಧಿಕಾರಿಗಳು ಜನ ಸೇವಕರೇ ಹೊರತು ದೊರೆಗಳಲ್ಲ. ಜಿಲ್ಲಾ ಮಟ್ಟದಲ್ಲಿ ಓರ್ವ ಜಿಲ್ಲಾಧಿಕಾರಿಯೇ ಇರಲಿ ಇಲ್ಲ ಒಬ್ಬ ಪೊಲೀಸ್ ಎಸ್ಪಿಯೇ ಆಗಿರಲಿ ಅವರ ಕೆಲಸ ಆ ಜಿಲ್ಲೆಯ ಜನರ ಬವಣೆಗಳನ್ನ ನೀಗುವುದು, ನ್ಯಾಯ ಒದಗಿಸುವುದು ಮತ್ತು ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವುದು.

ಹಾಸನಕ್ಕೆ ವರ್ಗಾವಣೆಯಾಗಿ ಹಲವು ವಿವಾದಗಳಿಗೆ ಗುರಿಯಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಾನು ಜನ ಪ್ರತಿನಿಧಿಗಳಿಗಳಿಗಿಂತ ಮೇಲು ಎಂದು ತಿಳಿದುಕೊಂಡಿರುವುದರಲ್ಲಿ ತಪ್ಪೇನಿಲ್ಲ. ಜಿಲ್ಲಾಧಿಕಾರಿಯಾಗಿ ಅವರು ಜಿಲ್ಲಾ ದಂಡಾಧಿಕಾರಿಯೂ ಹೌದು. ಅದು ಒಂದು ಗೌರವಾನ್ವಿತ ಸ್ಥಾನ. ಆದರೆ ಒಬ್ಬ ಶಾಸಕ ಎಂಥವನೇ ಆಗಿರಲಿ ಆತ ಜನರಿಂದ ಆರಿಸಿ ಬಂದ ಒಬ್ಬ ಪ್ರತಿನಿಧಿ. ಒಬ್ಬ ಶಾಸಕನಿಗೆ ಶಾಸನ ಮಾಡುವ ಸಭೆಯಲ್ಲಿ ಭಾಗವಹಿಸುವ ಹಕ್ಕಿರುತ್ತದೆ ಅದು ಯಾವುದೇ ಅಧಿಕಾರಿಗೆ ಇಲ್ಲ. ಮತ್ತು ಶಾಸಕನಿಗೆ ಒಂದು ರಾಜ್ಯದ ದಿಕ್ಕನ್ನೇ ಬದಲಿಸುವ ಜನಾಶೀರ್ವಾದವಿರುತ್ತದೆ.

ಶಾಸಕರು ಹೇಳಿದ ಮಾತನ್ನೆಲ್ಲ ಒಬ್ಬ ಜಿಲ್ಲಾಧಿಕಾರಿ ಪಾಲಿಸಬೇಕೆಂದೇನಿಲ್ಲ, ಆದರೆ ಶಾಸಕರ ಮಾತನ್ನು ಕೇಳಲೇ ಬಾರದು ಎಂದು ಎಲ್ಲೂ ಇಲ್ಲ. ಶಾಸಕರು ಜನರಿಂದ ಆರಿಸಿ ಬಂದ  ಕಾರಣ ಅವರಿಗೆ ಒಬ್ಬ ಅಧಿಕಾರಿಗೆ ತಿಳಿಯದ ಅನೇಕ ವಿಷಯಗಳು ತಿಳಿದಿರುತ್ತವೆ. ಒಬ್ಬ ಶಾಸಕ ತನ್ನ ಬಹುತೇಕ ಜೀವಿತಾವಧಿಯನ್ನು ಆ ಜಿಲ್ಲೆಯಲ್ಲೇ ಕಳೆಯುತ್ತಾನೆ ಆದ್ದರಿಂದ ಆತನಿಗೆ ಆ ಜಿಲ್ಲೆಯ ಬಗ್ಗೆ ಕಾಳಜಿಯಿರುತ್ತದೆ ಮತ್ತು ಜನರ ಅಭಿಪ್ರಾಯದ ಹಂಗಿರುತ್ತದೆ. ಕೇವಲ ಎರಡು ಮೂರು ವರ್ಷಗಳಿಗೆ ಬಂದು ಹೋಗುವ ಅಧಿಕಾರಿಗೆ ಜಿಲ್ಲೆಯ ಬಗ್ಗೆ ಎಲ್ಲವೂ ತಿಳಿದಿರಲು ಸಾಧ್ಯವಿಲ್ಲ ಮತ್ತು ಜನಾಭಿಪ್ರಾಯವನ್ನು ನಿಭಾಯಿಸಲು ಸಾಧ್ಯವೂ ಇಲ್ಲ. ಅಂಥದ್ದರಲ್ಲಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ರೋಹಿಣಿ ಶಾಸಕರ ಮಾತಿಗೆ ಕ್ಯಾರೇ ಎನ್ನದಿರುವುದು, ಶಾಸಕರು ಕರೆ ಮಾಡಿದರೆ ಕರೆಯನ್ನು ಸ್ವೀಕರಿಸದಿರುವುದು, ಶಾಸಕರನ್ನು ಕಡೆಗಣಿಸುವುದು ಇದೆಲ್ಲ ಜನರಿಗೆ ಸರಿ ಕಂಡು ಬರುತ್ತಿಲ್ಲ.

ಒಬ್ಬ ಐಎಎಸ್  ಅಧಿಕಾರಿಯ ವೃತ್ತಿ ಜೀವನದಲ್ಲಿ ಜಿಲ್ಲಾಧಿಕಾರಿಗಿರಿ ಬರುವುದು ಕೆಲವೇ ವರ್ಷಗಳಷ್ಟು ಮಾತ್ರ. ಆನಂತರ ರಾಜಕಾರಣಿಗಳ ಕೆಳಗೆ ಅವರು ಕೆಲಸ ಮಾಡಬೇಕಾಗುತ್ತದೆ. ಈಗ ಈ ಅಧಿಕಾರವಿದೆಯೆಂದು ಮೆರೆದರೆ ಮುಂದೆ ಅದೇ ಮುಳುವಾಗಬಹುದು.ಸುಪ್ರೀಂಕೋರ್ಟ್ ಅನ್ನು ಪದೇ ಪದೇ ಉಲ್ಲೇಖಿಸುವ ರೋಹಿಣಿಯವರಿಗೆ ಸುಪ್ರೀಂ ಕೋರ್ಟ್ ಯಾವತ್ತೂ ಜನಪ್ರತಿನಿಧಿಗಳನ್ನು ಕಡೆಗಣಿಸಬೇಕು ಎಂದು ಹೇಳಿಲ್ಲಎಂಬುದು ತಿಳಿದಿಲ್ಲವೇ ಎಂದು ಕೆಲವು ಶಾಸಕರು ಕೇಳುತ್ತಾರೆ.. ಹಾಗೆನ್ನುವುದಾದರೆ ಜನರ ಪರವಾಗಿ ಕೆಲಸ ಮಾಡುತ್ತೇನೆ ಎನ್ನುವ ರೋಹಿಣಿ ಶಾಸಕರೂ ಜನರೇ ಎಂದು ತಿಳಿಯಬೇಕಾಗಿದೆ.

ಮಾಧ್ಯಮದವರಿಗೆ ಹೀರೋಯಿನ್ ತರಾ ಕಂಡು ಬರುವ ಈ ಅಧಿಕಾರಿ ಭ್ರಷ್ಟ ರಾಜಕಾರಣಿಗಳನ್ನು ಹೆಡೆಮುರಿಕಟ್ಟಿದ್ದಿದ್ದರೆ  ಯಾರಿಗೂ ಆಕ್ಷೇಪವಿರುತ್ತಿರಲಿಲ್ಲ, ಆದರೆ ಕೆಲವರ ಮಾತನ್ನು ಚಾಚೂ ತಪ್ಪದೆ ಪಾಲಿಸಿ ಇನ್ನು ಕೆಲವರನ್ನು ಕನಿಷ್ಠವಾಗಿ ಕಾಣುವ ಹಾಸನ ಜಿಲ್ಲಾಧಿಕಾರಿ ತಮ್ಮ ನಡೆಯನ್ನು ತಿದ್ದಿಕೊಂಡು ಜನಪ್ರತಿನಿಧಿಗಳಿಗೆ ಅವರಿಗೆ ಕೊಡಬೇಕಾದಷ್ಟು ಗೌರವವನ್ನಾದರೂ ಕೊಟ್ಟರೆ ಅವರ ಗೌರವವೂ ಬಹಳ ಕಾಲ ಉಳಿಯುತ್ತದೆ


ಸಂಬಂಧಿತ ಟ್ಯಾಗ್ಗಳು

ಹಾಸನ ರೋಹಿಣಿ ಸಿಂಧೂರಿ legislator MLA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Good job Medam all the best
  • Jayaram Gelaya
  • Driver
ದುರಹಂಕಾರದ ಮೊಟ್ಟೆ. ಕನ್ನಡಿಗರ ಮೇಲೆ ತೆಲುಗಿನವಳ ದರ್ಪ
  • Raju Patil
  • Media
ಒಳ್ಳೆಯ ಸಂದೇಶ ರೋಹಿಣ ಒಬ್ಬರೇ ಅಲ್ಲ, ಎಲ್ಲರೂ ಇದನ್ನ ತಿಳಿದುಕೊಳ್ಳಬೇಕು
  • ನಾಗೇಂದ್ರ
  • ಡ್ರೈವರ್