ಜನರಲ್ಲಿ ಆತಂಕ ಹುಟ್ಟಿಸಿದ ಸರಣಿ ಕಳ್ಳತನ !

Kannada News

03-06-2017

ಧಾರವಾಡ:- ಧಾರವಾಡ ನಗರದ ಹಲವೆಡೆ ಕಳ್ಳರು ಕೈಚಳಕ ತೋರಿದ್ದಾರೆ. ನಗರದ ಹಲವೆಡೆ ಸರಣಿ ಕಳ್ಳತನ ಮಾಡಿದ ಖದೀಮರು. ಧಾರವಾಡದ  ಶ್ರೀನಗರ, ಗಣೇಶ ನಗರ, ಶಾಂಭವಿ ನಗರದ ಹಲವು ಮನೆಗಳಿಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಶ್ರೀನಗರದ ಐಸಿಎಸ್ ಕಾಲೇಜಿನ ಸೆಕ್ಯುರಿಟಿ ಗಾರ್ಡ್ ಹಾಗೂ ಆತನ ಪತ್ನಿ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಮಾಂಗಲ್ಯ ಸರವನ್ನು ಕಳ್ಳರು ಕಿತ್ತೂಯ್ದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ. ಗಣೇಶ ನಗರದ ಮನೆ ಒಳನುಗ್ಗಿ ಮಹಿಳೆಯ ಮೇಲೆ ಹಲ್ಲೆ ನಡೆಸಿ  ಕಿವಿ ಓಲೆ ,ಮೊಬೈಲ್ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಸರಣಿ ಕಳ್ಳತನದಿಂದ ಜನರು ಆತಂಕಗೊಂಡಿದ್ದಾರೆ. ಕಳ್ಳತನಕ್ಕೆ ತಂದಿದ್ದ ಬೈಕ್ ಅನ್ನು ಸ್ಥಳದಲ್ಲೆ  ಬಿಟ್ಟು ಪರಾರಿಯಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ