ರೌಡಿಯೊಬ್ಬನನ್ನು ಬೆತ್ತಲೆಗೊಳಿಸಿ ಹಲ್ಲೆ: ವಿಡಿಯೋ ವೈರಲ್!

#Police #Rowdy #Dilip # Video Viral

25-09-2018 289

ಬೆಂಗಳೂರು: ನಗರದ ಹೊರವಲಯದ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ರೌಡಿ ದಿಲೀಪ್‍ನನ್ನು  ಕರೆತಂದು ಬೆತ್ತಲೆಗೊಳಿಸಿ ಹೊಡೆದು ಬಾಯ್ಬಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೌಡಿ ದಿಲೀಪ್‍ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಬೆತ್ತಲೆಗೊಳಿಸಿ ಹೊಡೆದು ಶಿಕ್ಷೆ ನೀಡಲಾಗಿರುವ ವಿಡಿಯೋಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕಳೆದ ಸೆಪ್ಟೆಂಬರ್ 3ರಂದು ದಿಲೀಪ್ ಸಹೋದರ ಕೊಲೆಯಾಗಿದ್ದನು. ವಿಶ್ವೇಶ್ವರಯ್ಯ ಲೇಔಟ್ ಬಳಿ ಸ್ಕೋಪಿ ಕೊಲೆಯಾಗಿತ್ತು. ತನ್ನ ಸಹೋದರನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳ ಮೇಲೆ ಪತ್ರಿಕಾರ ತೀರಿಸಿಕೊಳ್ಳಲು ದಿಲೀಪ್ ಸಿದ್ಧತೆ ನಡೆಸಿ ಸಂಚು ರೂಪಿಸಿದ್ದನು. ಇದನ್ನು ತಿಳಿದ ಪೊಲೀಸರು ಠಾಣೆಗೆ ದಿಲೀಪ್‍ನನ್ನು ಕರೆತಂದಿದ್ದರು.

ವಿಡಿಯೋದಲ್ಲಿ ಆರೋಪಿ ದಿಲೀಪ್ ನನ್ನು ಬೆತ್ತಲೆಗೊಳಿಸಿ, ಹಿಂದೆಯಿಂದ ಅಂದರೆ ಮುಖಕಾಣದಂಗೆ ನಿಂತುಕೊಂಡು ಹಲ್ಲೆ ಮಾಡಿದ್ದಾರೆ. ಮುಂದೆ ಹಲ್ಲೆ ಮಾಡುತ್ತಿರುದನ್ನು ವಿಡಿಯೋ ಮಾಡಿದ್ದಾರೆ. ಆದರೆ ಹಲ್ಲೆ ಮಾಡಿದವರು, ವಿಡಿಯೋ ಮಾಡುತ್ತಿರುವವರು ಯಾರು ಎಂದು ತಿಳಿದುಬಂದಿಲ್ಲ. ಆದರೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆಯ ನೆಪದಲ್ಲಿ ವಿಕೃತಿ ಮೆರೆತಿದ್ದಾರೆ ಎನ್ನುವ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಸಂಬಂಧಿತ ಟ್ಯಾಗ್ಗಳು

Rowdy Police ರೌಡಿ ದಿಲೀಪ್‍ ಜಾಲತಾಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ