ಸದಾಶಿವನಗರದಲ್ಲಿ ವಾಣಿಜ್ಯೀಕರಣಕ್ಕೆ ಸ್ಥಳೀಯರ ವಿರೋಧ

#Commercial #G.Parameshwara #Sadashivanagar

25-09-2018

ಬೆಂಗಳೂರು: ವಾಹನ ದಟ್ಟಣೆ, ಸಂಚಾರ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿರುವುದರಿಂದ ಸದಾಶಿವ ನಗರದಲ್ಲಿ ವಾಣಿಜ್ಯೀಕರಣ ನಿಲ್ಲಿಸುವಂತೆ ಸದಾಶಿವನಗರ ನಿವಾಸಿಗಳ ಸಂಘದ ಪ್ರತಿನಿಧಿಗಳು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಆಗ್ರಹಿಸಿದ್ದಾರೆ.

ಸದಾಶಿವನಗರದ ಬಿಡಿಎ ಕ್ವಾಟ್ರಸ್‍ನಲ್ಲಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ವಾಣಿಜ್ಯೀಕರಣ ನಿಲ್ಲಿಸುವಂತೆ ಮನವಿ ಸಲ್ಲಿಸಿ ವಾಣಿಜ್ಯೀಕರಣದಿಂದ ಉಂಟಾಗುವ ಸಮಸ್ಯೆಗಳನ್ನು ಬಿಚ್ಚಿಟ್ಟರು. ಸದಾಶಿವನಗರ ವೇಗವಾಗಿ ಬೆಳೆಯುತ್ತಿದೆ. ಬಹುತೇಕ ಭಾಗ ವಸತಿ ಪ್ರದೇಶದಿಂದ ವಾಣಿಜ್ಯ ಪ್ರದೇಶವಾಗಿ ಮಾರ್ಪಡುತ್ತಿದೆ. ಪ್ರತಿಷ್ಠಿತರೇ ನೆಲೆಸಿರುವ ಈ ಭಾಗದಲ್ಲಿ ವಾಹನ ದಟ್ಟಣೆ, ಸಂಚಾರ ಸಮಸ್ಯೆ ಎದುರಾಗುತ್ತಿದೆ. ವಿಶಾಲವಾದ ರಸ್ತೆಗಳಲ್ಲಿ ವಾಹನ ನಿಲಗಡೆಯೇ ಹೆಚ್ಚಾಗಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಬೆಳೆದಿರುವ ಈ ಭಾಗದಲ್ಲಿ ಈಗಾಗಲೇ ಇರುವ ವಾಣಿಜ್ಯ ಕಟ್ಟಡ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಉಪ ಮುಖ್ಯಮಂತ್ರಿಗಳು ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವುದರಿಂದ ಈ ಚರ್ಚೆ ಅತ್ಯಂತ ಮಹತ್ವ ಪಡೆದಿದೆ ಅಲ್ಲದೇ ಸ್ಥಳೀಯ ನಿವಾಸಿಯೂ ಆಗಿರುವ ಇವರು, ಇಲ್ಲಿನ ಸಮಸ್ಯೆಯನ್ನು ಅರಿತಿದ್ದು, ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸದ ಮೇಲೆ ಸಂಘದ ಪ್ರತಿನಿಧಿಗಳು ಭೇಟಿ ಮಾಡಿ ಚರ್ಚಿಸಿದರು.

ಎಲ್ಲರ ಸಮಸ್ಯೆಯನ್ನು ಶಾಂತಚಿತ್ತರಾಗಿ ಆಲಿಸಿದ ಪರಮೇಶ್ವರ್, ಆದಷ್ಟು ಬೇಗ ಇಲ್ಲಿನ ಬಹುತೇಕ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಜತೆ ಈ ವಿಚಾರವಾಗಿ ಚರ್ಚಿಸಿ ಮುಂದಿನ ಕ್ರಮಕ್ಕೆ ಸೂಚಿಸುವುದಾಗಿ ತಿಳಿಸಿದರು. ಸದಾಶಿವನಗರದಲ್ಲೇ ವಾಸವಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಸಂಬಂಧಿತ ಟ್ಯಾಗ್ಗಳು

Priyank Kharge Commercial ಶಾಂತಚಿತ್ತ ಮಹತ್ವ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ