ವೇಶ್ಯಾವಾಟಿಕೆ: ಇಬ್ಬರು ವಿದೇಶಿ ಮಹಿಳೆಯರ ರಕ್ಷಣೆ

#Jaymhal #Prostitution #Apartment

25-09-2018

ಬೆಂಗಳೂರು: ಜಯಮಹಲ್‍ನ ಅಪಾರ್ಟ್ ಮೆಂಟ್ ಒಂದರಲ್ಲಿ ವಿದೇಶಿ ಮಹಿಳೆಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ನಾಲ್ವರು ಹಾಗೂ ಹೆಬ್ಬಾಳದ ಮನೆಯೊಂದರಲ್ಲಿ ದಂಧೆ ನಡೆಸುತ್ತಿದ್ದ ಇಬ್ಬರು ಸೇರಿ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ,  ಉಜ್ಬೇಕಿಸ್ತಾನದ ಇಬ್ಬರು ಸೇರಿ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಯಮಹಲ್‍ನ ಅನುಪ್ ರಾಘವನ್, ಸೂರಜ್ ಬಿಸ್ವಾಸ್, ತಪಸ್‍ ಕುಮಾರ್, ಪ್ರವಾಸ್ ಬಿಸ್ವಾಸ್‍ನನ್ನು ಬಂಧಿಸಿ 36 ಸಾವಿರ ನಗದು, 12 ಮೊಬೈಲ್, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಡೆಸುತ್ತಿದ್ದ ದಂಧೆಯಲ್ಲಿದ್ದ ಉಜ್ಬೇಕಿಸ್ತಾನದ ಇಬ್ಬರು, ಹೊರ ರಾಜ್ಯದ ಇಬ್ಬರು ಸೇರಿ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ.

ಆರೋಪಿಗಳು ಜಯಮಹಲ್ ಮುಖ್ಯರಸ್ತೆಯ ಸರ್ವೀಸ್ ಅಪಾರ್ಟ್‍ಮೆಂಟ್‍ನಲ್ಲಿ ವಿದೇಶಿ ಮಹಿಳೆಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಹೊರ ರಾಜ್ಯದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಇದೇ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳದ ತನುಷ್ (24), ರಮಣಯ್ಯ (45) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 20 ಸಾವಿರ ನಗದು, 3 ಮೊಬೈಲ್‍ಗಳನ್ನು ವಶಪಡಿಸಿಕೊಂಡು ಓರ್ವ ಯುವತಿಯನ್ನು ರಕ್ಷಿಸಲಾಗಿದೆ. ಆರೋಪಿಗಳು ಬೇರೆ ರಾಜ್ಯಗಳಿಂದ ಹೆಚ್ಚಿನ ಉದ್ಯೋಗ ಕೊಡಿಸುವುದಾಗಿ ಯುವತಿಯರನ್ನು ಕರೆತಂದು ಮೊಬೈಲ್‍ನಲ್ಲಿ ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ