ಸಂದರ್ಶನಕ್ಕೆ ಬಂದ ಯುವತಿಯರಿಗೆ ಲೈಂಗಿಕ ಕಿರುಕುಳ !

Kannada News

03-06-2017

ಬೆಂಗಳೂರು:- ಸಂದರ್ಶನಕ್ಕೆ ಬಂದ ಯುವತಿಯರಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ. ಬೆಂಗಳೂರಿನಲ್ಲಿ ಮಾಜಿ ಸಚಿವನ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಜಮ್ಮು ಕಾಶ್ಮಿರದ  ಮಾಜಿ ಸಮಾಜ ಕಲ್ಯಾಣ ಸಚಿವರರಾದ ಅಬ್ದುಲ್ ಗಣಿ ಮಲ್ಲಿಕ್ ನ ಮಗ  ಹಬೀಬ್ ಗಣಿ ಅರೆಸ್ಟ್ ಆಗಿದ್ದಾನೆ. ಸಮಾಜ ಕಲ್ಯಾಣ ಸಚಿವರ ಮಗ ಹೆಣ್ಣು ಬಾಕ, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದನು.  ಹಬೀಬ್ ಗಣಿ  ಪಾರ್ಟ್ ಟೈಂ ಕೆಲಸ ಮಾಡುವುದಾಗಿ  ಕೆಲಸಕ್ಕೆ ಸೇರಿಕೊಂಡಿದ್ದ. ಕೊನೆಗೆ ಕಂಪನಿ ನನ್ನದು ಎಂದು  ಬಿಲ್ಡಪ್ ಕೊಡ್ತಾ ಇದ್ದ. ಕೆಲ್ಸಾ ಕೊಡಿಸುವುದಾಗಿ ಹೇಳಿ ಹುಡುಗಿಯರ ನಂಬರ್ ಕಲೆಕ್ಟ್ ಮಾಡಿ ಕರೆಯಿಸಿಕೊಂಡು ಬಂದ ಯುವತಿಯರಿಗೆ ಕಾರಿನಲ್ಲಿ ಕರೆದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಅರೋಪಿಯು ಬರೋಬ್ಬರಿ 300 ಯುವತಿಯರಿಗೆ ಕಿರುಕುಳ ನೀಡಿರುವುದಾಗಿ ತಿಳಿಸಿದು ಬಂದಿದೆ. ಹಬೀಬ್ ಗಣಿ ತಾನು ಕೆಲಸ ಮಾಡುತ್ತಿದ್ದ ಕಂಪನಿ ರಿಜಿಸ್ಟರ್ ಬುಕ್ ನಲ್ಲಿ ಯುವತಿಯರ ನಂಬರ್ ತೆಗೆದುಕೊಂಡು ಕಿರುಕುಳ ನೀಡುತ್ತಿದ್ದ. ಈತನಿಂದ ನೊಂದ ಉಡುಪಿ ಮೂಲದ ಯುವತಿ ದೂರು ಸಲ್ಲಿಸಿದ್ದರು . ಇದೀಗ ಪೊಲೀಸರು ಅರೋಪಿ ಹಬೀಬ್ ಗಣಿಯನ್ನು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ