20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆ ನೀರು

#Anekal #Rain #Bannerghatta

25-09-2018

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಆನೇಕಲ್ ಸುತ್ತಮುತ್ತ ಮತ್ತೆ ನಿನ್ನೆ ಸುರಿದ ಧಾರಕಾರ ಮಳೆ‌ಗೆ ಇಲ್ಲಿನ ನಿವಾಸಿಗಳು ತತ್ತರಿಸಿದ್ದಾರೆ. ಬನ್ನೇರುಘಟ್ಟ ವಿನಾಯಕ ಬಡಾವಣೆಯಲ್ಲಿನ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಅಲ್ಲದೆ ತಗ್ಗು ಪ್ರದೇಶಗಳಲ್ಲಿ ಮಳೆ ಅವಾಂತರಗಳನ್ನ ಸೃಷ್ಟಿಸಿದೆ. ಕಣ್ಣೀರಿಡುತ್ತಾ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಾ ಮನೆಗೆ ನುಗ್ಗಿರುವ ಮಳೆ ನೀರು ಹಾಗು ಕೊಳಚೆ ನೀರನ್ನು ಮಹಿಳೆಯರು ಹೊರಹಾಕುತ್ತಿದ್ದರು. ಮಳೆಯಿಂದ ಈ ಭಾಗದ ತಗ್ಗು ಪ್ರದೇಶಗಳಲ್ಲಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಚರಂಡಿ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯ ನಿವಾಸಿಗಳು ಅರೋಪಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Anekal Rain ಅಸ್ತವ್ಯಸ್ತ ಕಾರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ