‘ಬಿಜೆಪಿಯವರು ಅಧಿಕಾರದ ಹಪಾಹಪಿ ಬಿಡಲಿ’

#S.R.Patil # IT-ED #CBI #BJP #Siddaramaiah

25-09-2018

ಬಾಗಲಕೋಟೆ: ‘ಬಿಜೆಪಿಯವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂಬ ಹಗಲುಗನಸು, ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗು ಹಾಲಿ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟಿಲ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪಕ್ಷಕ್ಕೆ ಸಿದ್ದರಾಮಯ್ಯ ಅನಿವಾರ್ಯವಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಎಸ್.ಆರ್.ಪಾಟಿಲ್ ಜಾಣ ಉತ್ತರ ನೀಡಿದ್ದಾರೆ. ‘ಯಾರಿಗೂ ಯಾರೂ ಅನಿವಾರ್ಯವಲ್ಲ. ಆದರೆ, ಸಿದ್ದರಾಮಯ್ಯ ಪಕ್ಷದಲ್ಲಿ ಪ್ರಭಾವಿಗಳು, ಅವರು ಪಕ್ಷದಲ್ಲಿ ಎಲ್ಲಾ ಸಮಸ್ಯೆ ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ದೋಸ್ತಿ ಸರ್ಕಾರ ಮುಂದುವರೆಸಿಕೊಂಡು ಹೋಗಲು ಸಿದ್ದರಾಮಯ್ಯ ಸಹಕಾರ ನೀಡುತ್ತಾರೆ' ಎಂದರು.

ಇನ್ನು 'ಐಟಿ,ಇಡಿ,ಸಿಬಿಐ ಪ್ರಧಾನಮಂತ್ರಿಗಳ ಮೂಗಿನ ನೇರ ಕೆಲಸ ಮಾಡುತ್ತಿವೆ. ಇತಿಹಾಸದಲ್ಲೇ ಐಟಿ,ಇಡಿಯನ್ನು ಬಿಜೆಪಿಯಷ್ಟು ಯಾವ ಪಕ್ಷವೂ ದುರ್ಬಳಕೆ ಮಾಡಿಕೊಂಡಿಲ್ಲ. ಬಿಜೆಪಿಯವರು ಐಟಿ, ಇಡಿ, ಸಿಬಿಐ ಮೂಲಕ ತಮ್ಮ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಅದು ಎಂದಿಗೂ ಸಾಧ್ಯವಿಲ್ಲ' ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಗರು ಮೊದಲು ಅಧಿಕಾರದ ಹಪಾಹಪಿ ಬಿಡಲಿ ಎಂದು ಕಿವಿಮಾತನ್ನೂ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

S.R.Patil Siddaramaiah ನೈತಿಕ ಸ್ಥೈರ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ