ಕಾಶ್ಮೀರದ ಹುರಿಯತ್ ನಾಯಕರ ವಿರುದ್ಧ ಎಫ್.ಐ.ಆರ್  !

Kannada News

03-06-2017

ನವದೆಹಲಿ:- ರಾಷ್ಟೀಯ ತನಿಖಾ ಸಂಸ್ಥೆ  ತನಿಖಾ ಸಂಸ್ಥೆ ಹುರಿಯತ್ ನಾಯಕರು ಮತ್ತು ಸೈಯದ್ ಅಲಿ ಷಾ ಗಿಲಾನಿ ವಿರುದ್ಧ ಎಫ್.ಐ.ಆರ್  ದಾಖಲಿಸಿದೆ. ಭಯೋತ್ಪಾದನೆಗೆ ಹಣದ ನೆರವು ವಿಚಾರಕ್ಕೆ ಸಂಬಂಧಿಸಿದಂತೆ  ಎಫ್.ಐ.ಆರ್  ದಾಖಲಿಸಿದ್ದಾರೆ. ಎಫ್.ಐ.ಆರ್  ನಲ್ಲಿ 26/11 ರ ಮಾಸ್ಟರ್ ಮೈಂಡ್ ಹಫೀಜ್ ಸಯೈದ್ ,ನೀಮ್ ಖಾನ್ ಮತ್ತು ಫರೂಕ್ ಅಹಮದ್ ಹೆಸರುಗಳು ದಾಖಲಾಗಿವೆ, ಅಲ್ಲದೆ ಕಾಶ್ಮೀರದ 14 ಪ್ರದೇಶಗಳನ್ನು ಮತ್ತು ದೆಹಲಿಯ 4 ಪ್ರದೇಶಗಳಲ್ಲಿ ತನಿಖಾ ತಂಡ ವಿಶೇಷ ತನಿಖೆ ನಡೆಸಲಿದೆ. ತನಿಖಾ ತಂಡವು ಪ್ರತ್ಯೇಕವಾದಿಗಳ ಮನೆ ಮತ್ತಿತರ ಕಡೆ ಮಾಹಿತಿ ಕಲೆ ಹಾಕಲಿದೆ.  ಮೂಲಗಳ ಪ್ರಕಾರ 8 ಮಂದಿ ಹವಾಲ ದಂದೆ ಕೋರರ ಮನೆಗಳ ಮೇಲೆ ದಾಳಿ ನಡೆಸಿದ್ದು, ಈ ಹವಾಲ ದಂದೆ ಮತ್ತು ಭಯೋತ್ಪಾದನೆಗೆ ಹಣದ ನೆರವಿನ ಕುರಿತಂತೆ ಹತ್ತಿರದ ಸಂಬಂಧವಿರುವ ಶಂಕೆ ವ್ಯಕ್ತಪಡಿಸಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ