ಅರಣ್ಯ ಇಲಾಖೆ ದಿನಗೂಲಿ ನೌಕರರ ಭಾರೀ ಪ್ರತಿಭಟನೆ

#Wage #Employee #Forest Department  #Protest

24-09-2018

ಬೆಂಗಳೂರು: ಸಮಾನ ಕೆಲಸಕ್ಕೆ ಸಮಾನ ವೇತನ ವೇತನ ಪಿಂಚಣಿ ಸೌಲಭ್ಯ ಜಾರಿಗೆ ಆಗ್ರಹಿಸಿ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಫ್ರೀಡಂ ಪಾರ್ಕ್‍ನಲ್ಲಿ ಸೋಮವಾರ ಸೇರಿದ ದಿನಗೂಲಿ ನೌಕರರು ಹೆಚ್ಚುವರಿ ವೇತನ ಪಡೆಯುವ ಪಿಸಿಪಿ ನೌಕರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎ.ಎಂ.ನಾಗರಾಜು ಅವರು  ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ಅಡಿ ಅಧಿಸೂಚನೆಗೊಂಡು ಸಕ್ರಮಗೊಳಿಸಿದ ನೌಕರರ ಆರನೇ ವೇತನ ಆಯೋಗ ಶಿಫಾರಸ್ಸು ಜಾರಿಯಾಗಬೇಕು ಎಂದರು.

ಹೊಸದಾಗಿ ಕನಿಷ್ಟ ಮೂಲ ವೇತಮ ಜಾರಿಗೆ ಜೊತೆಗೆ ಮೂಲ ವೇತನಕ್ಕೆ ಶೇಕಡ 74ರಷ್ಟು ಬದಲಾಗಿ ನೂರಾರಷ್ಟು ತುಟ್ಟಿ ಭತ್ಯೆ ಸೌಲಭ್ಯ ಕಲ್ಪಿಸಬೇಕು ಅರಣ್ಯ ಇಲಾಖೆಯಲ್ಲಿ 1984 ಸಾಲಿನಲ್ಲಿ ದಿನಗೂಲಿ ಸೇವೆಗೆ ಸೇರುವ ಸುಮಾರು ನೂರಕ್ಕೂ ಅಧಿಕ ಮಂದಿ ನೌಕರರಿದ್ದಾರೆ.ಅವರನ್ನು 1990 ಆದೇಶದಂತೆ ಸಕ್ರಮಗೊಳಿಸಬೇಕು ಎಂದು ಆಗ್ರಹಿಸಿದರು.

ಹತ್ತು ವರ್ಷ ಸೇವೆ ಪೂರೈಸಿದ ಎಲ್ಲಾ ವರ್ಗದ ನೌಕರರಿಗೆ ಹೆಚ್ಚುವರಿ ವೇತನ ಸೌಲಭ್ಯ ಪಾವತಿಸಬೇಕು ಹಾಗೂ ಹಿಂದಿನ ವರ್ಷಗಳಿಗೆ ಬರಬೇಕಾದ ವ್ಯತ್ಯಾಸ ಬಾಕಿ ನೀಡಬೇಕು. ಹಾಲಿ ಮಡಿಕೇರಿ ವೃತ್ತದಲ್ಲಿ ಒಟ್ಟು 140 ಜನ ನೌಕರರು ದಿನಗೂಲಿ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನೌಕರರ ಪೈಕಿ ಕಾಲು ಭಾಗದಷ್ಟು ನೌಕರರಿಗೆ ಮಾತ್ರ ಅವರ ಹೆಸರಿನಲ್ಲಿ ಓಚರ್ ಮೂಲಕ ಸಹಿ ಪಡೆದು ಸಂಬಳ ಪಾವತಿಸಲಾಗುತ್ತಿದೆ. ಉಳಿದ ಮುಕ್ಕಾಲು ಭಾಗ ನೌಕರರಿಗೆ ಬೇನಾಮಿ ಹೆಸರಿನಲ್ಲಿ ಬಿಲ್ ತಯಾರಿಸಿ ನಿಜವಾದ ನೌಕರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.


ಸಂಬಂಧಿತ ಟ್ಯಾಗ್ಗಳು

Wage Employee Forest Department ದಿನಗೂಲಿ ಅಧಿಸೂಚನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಅರಣ್ಯ ಇಲಾಖೆ ದಿನ ಗುಲಿ ನೌಕರರ ವೇತನ ಹೆಚ್ಚಳ
  • Jagadish. R
  • ಅರಣ್ಯ ಇಲಾಖೆ
ಖಾಯಂ ನೌಕರಿ ಅಕ್ವೊಂಟ್ ಗೆ ಸಂಬಳ ಹಾಕುವ ಕುರಿತು ನಾವು ಕಳೆದ ಹತ್ತು ವರ್ಷಗಳಿಂದ ಪಿಸಿಪಿ ವಾಚರಗಳಾಗಿ ಕೆಲಸ ಮಾಡುತಿದು
  • Anand Kadappa Salimani
  • Karnataka Forest PCP wachar
ಖಾಯಂ ನೌಕರಿ ಅಕ್ವೊಂಟ್ ಗೆ ಸಂಬಳ ಹಾಕುವ ಕುರಿತು ನಾವು ಕಳೆದ ಹತ್ತು ವರ್ಷಗಳಿಂದ ಪಿಸಿಪಿ ವಾಚರಗಳಾಗಿ ಕೆಲಸ ಮಾಡುತಿದು
  • Anand Kadappa Salimani
  • Karnataka Forest PCP wachar