ಕ್ಲಬ್‍ ಗಳಲ್ಲಿ ಅಕ್ರಮ ಜೂಜಾಟ: ಸಿಸಿಬಿ ಪೊಲೀಸರ ದಾಳಿ

#Club #Illegal Activities #Gambling

24-09-2018

ಬೆಂಗಳೂರು: ಉಪ್ಪಾರಪೇಟೆಯ ಅಲಂಕಾರ ಪ್ಲಾಜಾ ಹಾಗೂ ಬಳೆ ಪೇಟೆಯ ಮಹಾಲಕ್ಷ್ಮೀ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇನ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಇಸ್ಪೀಟ್ ಕ್ಲಬ್‍ಗಳ ಮಾಲೀಕರು ಸೇರಿ 194 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ 38 ಲಕ್ಷ 12 ಸಾವಿರದ 150 ನಗದು, 16 ಲಕ್ಷ 93 ಸಾವಿರ 710 ಮೌಲ್ಯದ ಟೋಕನ್‍ಗಳು ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ಲಬ್‍ನಲ್ಲಿ ಅಕ್ರಮವಾಗಿ ಜೂಜಾಟವನ್ನು ನಡೆಸುತ್ತಿದ್ದ ಮಾಹಿತಿ ಆಧರಿಸಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Illegal Activitie Police ಸಿಸಿಬಿ ಕ್ಲಬ್‍


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ