ವೇಶ್ಯಾವಾಟಿಕೆ ದಂಧೆ: ಪಶ್ಚಿಮ ಬಂಗಾಳ ಯುವತಿಯರ ರಕ್ಷಣೆ

#Prostitution #Illegal #West Bengal #Arrest

24-09-2018

ಬೆಂಗಳೂರು: ಹೆಚ್ಚಿನ ವೇತನದ ಉದ್ಯೋಗ ಕೊಡಿಸುವ ನೆಪದಲ್ಲಿ ಪಶ್ಚಿಮ ಬಂಗಾಳದ ಯುವತಿಯರನ್ನು ಕರೆ ತಂದು ಮಡಿವಾಳದ ಟೀಚರ್ಸ್ ಕಾಲೋನಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ದಂಧೆ ನಡೆಸುತ್ತಿದ್ದ ಆರ್.ಟಿ ನಗರದ ತಾಹಿರ್ ಅಹ್ಮದ್ (35) ಹೊಳೆನರಸೀಪುರದ ರಘು (28)ನನ್ನು ಬಂಧಿಸಿ 11 ಸಾವಿರ ನಗದು, ಮೂರು ಮೊಬೈಲ್‍ಗಳನ್ನು ವಶಪಡಿಸಿಕೊಂಡು ಪಶ್ಚಿಮ ಬಂಗಾಳದ ಮೂವರು ಸೇರಿ, ನಾಲ್ವರು ಯುವತಿಯರನ್ನು ರಕ್ಷಿಸಲಾಗಿದೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಆರೋಪಿಗಳು ಮಡಿವಾಳದ ಟೀಚರ್ಸ್ ಕಾಲೋನಿಯ ಮನೆಯೊಂದನ್ನು ಬಾಡಿಗೆ ಪಡೆದು ಹೊರ ರಾಜ್ಯದಿಂದ ಉದ್ಯೋಗ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ಮೊಬೈಲ್ ನಲ್ಲಿ ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Prostitution Illegal ಉದ್ಯೋಗ ದಂಧೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ