ಭಾರೀ ಮಳೆ: ಅಪಾರ್ಟ್ ಮೆಂಟ್ ನಿವಾಸಿಗಳು ತತ್ತರ

#Appartements #Heavy Rain #Anekal

24-09-2018 271

ಬೆಂಗಳೂರು: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಗ್ರಾಮಾಂತರ ಆನೇಕಲ್ ನ ಹಲವು ಭಾಗಗಳು ಜಲಾವೃತವಾಗಿವೆ. ಭಾರೀ ಮಳೆಗೆ ಅಪಾರ್ಟ್ ಮೆಂಟ್ ನಿವಾಸಿಗಳು ತತ್ತರಿಸಿದ್ದಾರೆ. ತಡರಾತ್ರಿ ಸುರಿದ ಮಳೆಗೆ ಅಪಾರ್ಟ್ ಮೆಂಟ್ ನ ತಳಹಂತದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿವೆ. ಆನೇಕಲ್ ನ ಕಾಳೇನ ಅಗ್ರಹಾರ, ಬಿಳೇಕಳ್ಳಿ ಬಳಿಯ ಅಪಾರ್ಟ್ ಮೆಂಟ್ ಗೆ ನೀರು ನುಗ್ಗಿವೆ. ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸ್ಥಳೀಯ ನಿವಾಸಿಗಳು ಹಿಡಿ ಶಾಪ‌ ಹಾಕುತ್ತಿದ್ದಾರೆ. ನಿಂತಿರುವ ನೀರಿನಿಂದ ಬೆಳಿಗ್ಗೆ ಕೆಲಸಕ್ಕೆ ಹೋಗದ ಕಾರ್ಮಿಕ ವರ್ಗ ಪರದಾಡುವಂತಾಗಿದೆ. ಕೆರೆ-ಕುಂಟೆ, ರಾಜಕಾಲುವೆ ಒತ್ತುವರಿಯಿಂದ ನೀರು ನಿಂತಲ್ಲೇ ನಿಂತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Appartements Rain ವಾಹನ ಮುಳುಗಡೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ