ಹೊಡೆತಕ್ಕೆ ಪ್ರಶಸ್ತಿ!!

Award for the shot !!

23-09-2018 3146

ನೀವು ವಿಶ್ವದ ಯಾವುದೇ ಸಭ್ಯ ರಾಷ್ಟ್ರದ ಟಿವಿ ಕಾರ್ಯಕ್ರಮಗಳನ್ನು ನೋಡಿ, ಅದರಲ್ಲಿ ನೀವು ಯಾರೂ ಯಾರಿಗೂ ಹೊಡೆಯುವುದಿಲ್ಲ. ವ್ಯಕ್ತಿ ವ್ಯಕ್ತಿಗಳಿಗೆ ಹೊಡೆಯುವುದಿಲ್ಲ. ಆಫ್ರಿಕಾದ ಟಿವಿ ಚಾನಲ್ ಗಳಲ್ಲೂ ಆ ಅನಿಷ್ಟ ಕಾಣುವುದಿಲ್ಲ.  ಹೊಡೆಯುವುದನ್ನು ತೋರಿಸಿದರು ಎಂದಿಟ್ಟುಕೊಳ್ಳಿ ಆಗ ಹೊಡೆದ ವ್ಯಕ್ತಿ ಅಥವ ಪಾತ್ರ  ಮಾನಸಿಕವಾಗಿ ಅಸ್ವಸ್ಥವಾಗಿರಬೇಕು ಇಲ್ಲ ಕ್ರೂರಿಯಾಗಿರಬೇಕು ಇಲ್ಲ ವಿಲಕ್ಷಣ ವ್ಯಕ್ತಿತ್ವ ವುಳ್ಳ ವ್ಯಕ್ತಿ ಅಥವ ಪಾತ್ರವಾಗಿರಬೇಕು. ಆದರೆ ಭಾರತದಲ್ಲಿ ಟಿವಿ ಧಾರಾವಾಹಿಗಳಲ್ಲಿ ಸಭ್ಯರಂತೆ ಕಾಣುವ ಕುಟುಂಬದಲ್ಲಿ ಹೆಂಗಸರು ಗಂಡಸರಿಗೆ ಹೊಡೆಯುವುದು ಹೆಂಗಸರು ಹೆಂಗಸರಿಗೆ ಹೊಡೆಯುವುದು ಗಂಡಸರು ಹೆಂಗಸರಿಗೆ ಹೊಡೆಯುವುದು ಎಲ್ಲ ಸರ್ವೇ ಸಾಮಾನ್ಯ. ಅದರಲ್ಲೂ ಅದನ್ನೆಲ್ಲ ಅದೇನೋ ಮಹತ್ಸಾಧನೆ ಎನ್ನುವಂತೆ ತೋರಿಸಲಾಗುತ್ತದೆ. ಹೊಡೆಯುವುದು ಅಮಾನುಷ, ಅಸಭ್ಯ ಮತ್ತು ಅನಾಗರೀಕ ಎಂಬ ಪ್ರಜ್ಞೆಯೂ ಇಲ್ಲದೆ ಹೊಡೆಯಲಾಗುತ್ತದೆ ಮತ್ತು ಹೊಡೆತ ತಿನ್ನಲಾಗುತ್ತದೆ. ಮುಖಕ್ಕೆ ಹೊಡೆಯುವುದು ಭಾರತೀಯ ಸಂಸ್ಕೃತಿಯ ಭಾಗವೇನೋ ಎಂಬಂತೆ ತೋರಿಸಲಾಗುತ್ತದೆ.

ಸಂಸಾರದೊಳಗೆ ಹೊಡೆಯುವುದು ಮತ್ತು ಹೊಡೆತ ತಿನ್ನುವುದನ್ನು ತೋರಿಸುವುದರಿಂದ ಸೀರಿಯಲ್ ನೋಡುವ ಮಕ್ಕಳ ಮೇಲೆ ಏನು ಪರಿಣಾಮವಾಗುತ್ತದೆ ಮತ್ತು ಅವರು ವಯಸ್ಕರ ನಡವಳಿಕೆಯ ಬಗ್ಗೆ ಏನು ಅಭಿಪ್ರಾಯವನ್ನು ತಳೆಯುತ್ತಾರೆ ಎಂಬ ಬಗ್ಗೆ ಈ ಸೀರಿಯಲ್ ಮಂದಿ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ.

ಅದಿರಲಿ, ಈಗ ಹೊಡೆಯುವುದಕ್ಕೆ ಮತ್ತು ಹೊಡೆತ ತಿನ್ನುವುದಕ್ಕೆ ಪ್ರಶಸ್ತಿಯ ಮಾನ್ಯತೆಯೂ ಸಿಕ್ಕಿದೆ. ಇತ್ತೀಚಿಗೆ ನಡೆದ ಕಲರ್ಸ್ ವಾಹಿನಿಯ ಅನುಬಂಧ ಕಾರ್ಯಕ್ರಮದಲ್ಲಿ ಹೊಡೆತ ಮತ್ತು ಬೈಗುಳ ತಿಂದ ತನು ಪಾತ್ರದಾರಿ ನಟಿಗೆ ಆ ಕಾರಣಕ್ಕೇ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನು ಮನೆ ಮನೆಯಲ್ಲೂ ಮಹಿಳೆಯರು ಹೊಡೆತ ತಿಂದರೆ ಅದರ ಬಗ್ಗೆ ಬೇಸರ ಪಡುವ ಅಗತ್ಯವಿಲ್ಲವೆಂಬ ಸಂದೇಶವನ್ನೂ ಅದರೊಂದಿಗೆ ನೀಡಲಾಯಿತೇನೊ!


ಸಂಬಂಧಿತ ಟ್ಯಾಗ್ಗಳು

Award ಸರಣಿ ನಟ ನಟಿಸಿದ್ದಾರೆ Indian Culture


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ