ಇದು ಬಿಜೆಪಿಯವರ ಡಿಕ್ಟೇಟರ್ ಶಿಪ್: ಮಲ್ಲಿಕಾರ್ಜುನ ಖರ್ಗೆ

#Mallikarjun Kharge #Dictatorship #Operation Kamala

22-09-2018

ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಸಂಸದ ಹಾಗು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಪಕ್ಷದಲ್ಲಿ ಒಡಕು ಮೂಡಿಸುವುದು ಭಿನ್ನಭಿಪ್ರಾಯ ಉಂಟುಮಾಡುವುದೇ ಬಿಜೆಪಿಯವರ ಕೆಲಸ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ಕೂಡ ಗೋವಾದಲ್ಲಿ ಸರ್ಕಾರ ರಚಿಸಿದ್ದರು. ಈಗ ಮೆಜಾರಿಟಿ ಸರ್ಕಾರ ಅಸ್ತಿತ್ವದಲ್ಲಿದೆ, ಅದನ್ನೂ ತೆಗೆಯಬೇಕೆಂದು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ದೂರಿದ್ದಾರೆ.

‘ಸಿಎಂ ‘ದಂಗೆ’ ಹೇಳಿಕೆ ವಿಚಾರವಾಗಿ, ಅದಕ್ಕೆ ಸಿಎಂ ಕುಮಾರಸ್ವಾಮಿ ಈಗಾಗಲೇ ಕ್ಲಾರಿಫಿಕೇಶನ್ ಕೊಟ್ಟಿದ್ದಾರೆ. ನಾನು ಹಾಗೆ ಹೇಳಿಲ್ಲ ಅಂತ ಸಿಎಂ ಅವರೇ ಹೇಳಿದ್ದಾರೆ. ಬಿಜೆಪಿಯವರಿಗೆ ಇದೇ ಕೆಲಸ. ರಾಜ್ಯಪಾಲರಿಗೆ ದೂರ ಕೊಡ್ತಾರೆ, ಕೇಂದ್ರಕ್ಕೂ ದೂರು ಕೊಡ್ತಾರೆ ಇದು ಅವರ ಕೆಲಸ. ಕೇಂದ್ರದಲ್ಲಿ ತಮ್ಮ‌ ಅಧಿಕಾರವಿದೆ ಅಂತ ಹೆದರಿಸುತ್ತಾರೆ, ಇದು ಬಿಜೆಪಿಯವರ ಡಿಕ್ಟೇಟರ್ ಶಿಪ್ ಎಂದು  ಬಿಜೆಪಿ ನಾಯಕರ ವಿರುದ್ಧ ಖರ್ಗೆ ಗರಂ ಆದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ