ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ: ಉದ್ವಿಗ್ನ ಪರಿಸ್ಥಿತಿ

#Belagavi #Procession #Stones

22-09-2018

ಬೆಳಗಾವಿ: ನಗರದ ಬೆಂಡಿ ಬಜಾರ್ ತೆಂಗಿನಕರಗಲ್ಲಿಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಗಣಪತಿ ಮೂರ್ತಿಯ ಕಿವಿ ಭಾಗ ಮತ್ತು ಕಾಲಿನ ಭಾಗ ವಿರೂಪಗೊಂಡಿದೆ. ಘಟನೆಯಲ್ಲಿ ಎರಡು ರಿಕ್ಷಾ ಮತ್ತು ಒಂದು ಟಾಟಾ ಏಸ್ ವಾಹನ ಜಖಂಗೊಂಡಿದೆ. ಈ ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೆ ಕ್ರಮ ಕೈಗೊಂಡ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ನೂರಕ್ಕೂ ಹೆಚ್ಚು ಪೊಲೀಸರನ್ನು ಘಟನಾ ಸ್ಥಳದಲ್ಲಿ ನಿಯೋಜಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಕಮಿಷನರ್, ಡಿಸಿಪಿ ಸೀಮಾ ಲಾಟ್ಕರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

Belagavi Procession ಕಿಡಿಗೇಡಿ ಕಲ್ಲು ತೂರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ