ಬಿಎಸ್ವೈ ರೀತಿ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ: ಸಿಎಂ

#H.D.Kumaraswamy #Sringeri #Yeddyurappa

22-09-2018

ಚಿಕ್ಕಮಗಳೂರು: ಶೃಂಗೇರಿಗೆ ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತ ಆಗಮಿಸಿದ್ದು, ‘ಶಾರದಾಂಬೆಯ ದರ್ಶನಕ್ಕಾಗಿ ಆಗಮಿಸಿದ್ದೇನೆ ಯಾವುದೇ ವಿಶೇಷ ಪೂಜೆ ಇಲ್ಲ ಎಂದಿದ್ದಾರೆ. ಈ ವೇಳೆ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದಾಗಿಯೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾಳೆ ಸಂಜೆ ಹಾಸನದಲ್ಲಿ ವಾಸ್ತವ್ಯ ಹೂಡುತ್ತೇನೆ. ಹಾಸನದಲ್ಲಿ ನಡೆಯುವ ಶಾಸಕಾಂಗ ಸಭೆಗೆ ಯಾವುದೇ ವಿಶೇಷತೆ ಇಲ್ಲ. ತಾನೂ ಸಹ ಶಾಸಕಾಂಗ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು. ಎಲ್ಲಾ ಶಾಸಕರಿಗೂ ಆಹ್ವಾನ ನೀಡಲಾಗಿದೆ' ಎಂದರು.

‘ತನ್ನ ವಿರುದ್ಧ ರಾಜ್ಯ ಪಾಲರಿಗೆ ನೀಡಿರುವ ದೂರು ಸಂತೋಷ, ರಾಜ್ಯಪಾಲರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇ‌ನೆ, ದಂಗೆ ಹೇಳಿಕೆಯ ಅರ್ಥ ಪ್ರತಿಭಟನೆ ಎಂದು, ಯಡಿಯೂರಪ್ಪನವರು ಹಲವು ಬಾರಿ ಬೆಂಕಿ ಹಚ್ಚುವ ಹೇಳಿಕೆಗಳನ್ನು ನೀಡಿದ್ದಾರೆ. ಅವರ ಹಾಗೆ ತಾನು ಬೆಂಕಿ ಹಚ್ಚುವ ಹೇಳಿಕೆ ನೀಡಿಲ್ಲ. ಅವರು ಬೆಂಕಿ ಹಚ್ಚುವ ಹೇಳಿಕೆ ನೀಡಿದರೆ ಅದು ಪ್ರಜಾಪ್ರಭುತ್ವ, ನಾನು ಹೇಳಿದರೆ ಅದು ಪ್ರಜಾಪ್ರಭುತ್ವ ವಿರೋಧಿ’ ಎಂದು ಯಡಿಯೂರಪ್ಪನವರ ವಿರುದ್ಧ ಕಿಡಿಕಾರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

#H.D.Kumaraswamy Sringeri ಬೆಂಕಿ ಸಂತೋಷ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ