ಗಣೇಶ ಮೆರವಣಿಗೆ ವೇಳೆ ಕೋರ್ಟ್ ಆದೇಶ ಉಲ್ಲಂಘನೆ!

#Ganesh Procession #Koppal #Karadi Sanganna

22-09-2018

ಕೊಪ್ಪಳ: ನಗರದಲ್ಲಿ ನಿನ್ನೆ ರಾತ್ರಿಯಿಂದ ನಡೆದ ಗಣೇಶ ಮೆರವಣಿಗೆ ಮತ್ತು ಗಣೇಶನ ಮೂರ್ತಿ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ. ಮೆರವಣಿಗೆ ವೇಳೆ ಕೊಪ್ಪಳದ ಸಂಸದ ಕರಡಿ ಸಂಗಣ್ಣ ಯುವಕರೊಂದಿಗೆ ಸ್ಟೆಪ್ಸ್ ಹಾಕಿದ್ದಾರೆ. ಮೆರವಣಿಗೆ ವೇಳೆ ಬೆಳಗಿನ ಜಾವ 6:30ಕ್ಕೆ ಬಂದ ಸಂಗಣ್ಣ ಕರಡಿ ಡಿಜೆ ಮ್ಯೂಸಿಕ್ ಗೆ ಯುವಕರೊಂದಿಗೆ ಕುಣಿದಾಡಿದ್ದಾರೆ.

ಸಂಗಣ್ಣ ಕರಡಿಯೊಂದಿಗೆ ಮೋದಿ‌ ಮೋದಿ ಅಂತ ಜೋಶ್ ನಲ್ಲಿ ಯುವಕರೂ ಸಹ ಸ್ಟೆಪ್ಸ್ ಹಾಕಿದ್ದಾರೆ. ಇವೆಲ್ಲದರ ಮಧ್ಯೆ ಕೊಪ್ಪಳದ ರಾಜ ಗಣೇಶ ಮಂಡಳಿ ಅತಿ ಹೆಚ್ಚು ಧ್ವನಿ ಹೊರಸೂಸುವ ಧ್ವನಿವರ್ಧಕಗಳನ್ನು ಬಳಸಿ, ಜಿಲ್ಲಾಧಿಕಾರಿ ಹಾಗೂ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ganesh Procession Koppal ರಾಜ ಗಣೇಶ ಉಲ್ಲಂಘನೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ