ಮೊಹರಂ ಆಚರಣೆ: ಎರಡು ಕೋಮು ಜನರ ನಡುವೆ ಗಲಾಟೆ!

#Muharram #Communities #Celebration

22-09-2018

ವಿಜಯಪುರ: ಮೊಹರಂ ಹಬ್ಬ ಆಚರಣೆ ವೇಳೆ ಎರಡು ಕೋಮುಗಳ ಮಧ್ಯೆ ಗಲಾಟೆ ನಡೆದಿದ್ದು, ಎರಡು ಕೋಮುಗಳ ಮಧ್ಯೆ ಹೊಡೆದಾಟದಲ್ಲಿ ಆರು ಜನರಿಗೆ ಗಾಯಗಳಾಗಿವೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಮೊಹರಂ ಆಚರಣೆ ವೇಳೆ ಎರಡು ಕೋಮಿನ ಜನ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. 

ಒಂದು ಕೋಮಿನ ಜನ ಮತ್ತೊಂದು ಕೋಮಿನ ಜನರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕಲಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಕಳೆದ ಒಂದು ವಾರದ ಹಿಂದೆಯೂ ಸಹ ಗ್ರಾಮದಲ್ಲಿ ಎರಡು ಕೋಮಿನ ನಡುವೆ ಹೊಡೆದಾಟ ನಡೆದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ, ಕಳೆದ ಒಂದು ವಾರದಿಂದ ಡಿಎಆರ್ ತುಕಡಿ, ಪೊಲೀಸರು ಗ್ರಾಮದಲ್ಲೇ ಬೀಡು ಬಿಟ್ಟಿದ್ದರು. ಪೊಲೀಸ್ ಭದ್ರತೆ ಇದ್ದರೂ ಸಹ ಪರಸ್ಪರ ಎರಡು ಕೋಮಿನವರು ಹೊಡೆದಾಡಿಕೊಂಡಿದ್ದಾರೆ. ಕಲಕೇರಿ ಠಾಣೆ ಪೊಲೀಸರ ವೈಫಲ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ