ಅನೈತಿಕ ಸಂಬಂಧ: ಮಹಿಳೆ ಕೊಲೆ

#Murder #Illegal relationship #Arrested

22-09-2018 194

ಹಾವೇರಿ: ಜಿಲ್ಲೆಯ ಕಾಗಿನೆಲೆ ಸಮೀಪದ ತಿಳುವಳ್ಳಿ ಗ್ರಾಮದಲ್ಲಿನ ಒಂಟಿ ಮನೆಯಲ್ಲಿ ಗೃಹಿಣಿಯೊಬ್ಬರನ್ನು ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ. ಪ್ರಿಯಕರನಿಂದಲೇ ಪ್ರೇಯಸಿಯ ಹತ್ಯೆ ನೆಡೆದಿದೆ ಎನ್ನಲಾಗಿದ್ದು, ರಾಧಾ ಉಲ್ಲಾಸ್ ಕಾಂಡೇಕರ್ (36) ಕೊಲೆಯಾದ ಮಹಿಳೆ. ಪ್ರಿಯಕರ ಅರುಣ್ (24) ಎಂಬಾತನೇ ಕೊಲೆ ಆರೋಪಿ. ಈಗಾಗಲೇ ರಾಧಾ ಅವರಿಗೆ ವಿಲಾಸ್ ಎಂಬುವರೊಂದಿಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳೂ ಸಹ ಇದ್ದಾರೆ ಎಂದು ತಿಳಿದು ಬಂದಿದೆ.

ಅರುಣ್ ಮತ್ತು ರಾಧಾ ನಡುವೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದ್ದು, ನಿನ್ನೆ ಬೆಳಿಗ್ಗೆ ರಾಧಾಳ ಗಂಡ ವಿಲಾಸ್ ಹಾಲು ತರಲು ಹೋಗಿದ್ದಾಗ ಪ್ರಿಯಕರ ಅರುಣ್ ಈ ಕೃತ್ಯ ಎಸಗಿದ್ದಾರೆ. ಘಟನೆ ಸಂಬಂಧ ಕಾಗಿನೆಲೆ ಪೊಲೀಸರು ಆರೋಪಿ ಅರುಣ್ ನನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.  ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

Murder Illegal relationship ತನಿಖೆ ಗೃಹಿಣಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ