ಕಾಂಗ್ರೆಸ್ ಮತ್ತೆ ಪತನವಾದರೆ ಶತಶತ ಮಾನಕ್ಕೆ ಎದ್ದು ಬರುವುದಿಲ್ಲ !

Kannada News

02-06-2017

ಬೆಂಗಳೂರು:- ಕಾಂಗ್ರೆಸ್ ನಾಯಕ ಉಗ್ರಪ್ಪ‌ ವಿರುದ್ದ ಕೇಂದ್ರ ಸಚಿವ ಸದಾನಂದಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ . ಕಾಂಗ್ರೆಸ್ ಪಕ್ಷ‌ ಮತೀಯ ಶಕ್ತಿಗಳ ಕೇಂದ್ರ. ಸಭಾಪತಿ ಡಿ.ಎಚ್. ಶಂಕರ್ ಮೂರ್ತಿ ಅವರ ನಿರ್ಧಾರಗಳು ಕಠಿಣವಾಗಿದ್ದು, ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದು ಉಗ್ರಪ್ಪ ಅವರು ಹೇಳಿಕೆ ನೀಡಿದ್ದಾರೆ. ಇಡೀ ದೇಶದಲ್ಲಿ ಮತೀಯ ಶಕ್ತಿಯಾರು, ತೃತೀಯ ಶಕ್ತಿಯಾರು ಅನ್ನೋದು ಜಗತ್ತಿಗೆ ಗೊತ್ತಿದೆ. ಉತ್ತರ ಪ್ರದೇಶದಲ್ಲಿ 7 ಸ್ಥಾನ ಪಡೆದ ಕಾಂಗ್ರೆಸ್ ನಮಗೆ ಬುದ್ದಿ ಹೇಳೋದು ಬೇಡ. ಉಗ್ರಪ್ಪ ಮೊದಲು ಲೆಕ್ಕ ಕಲಿಯಲಿ. ಅವರ ಲೆಕ್ಕದ ಮೇಷ್ಟ್ರು ಯಾರು ಅಂತ ನನಗೆ ಗೊತ್ತಿಲ್ಲ. ದೇಶಾದ್ಯಂತ ಇನ್ನು ಸ್ಬಲ್ಪ ದಿನ ಮಾತ್ರ ಕಾಂಗ್ರೆಸ್ ಹಾರಾಟ, ಮತ್ತೆ ಪತನವಾದರೆ ಶತ ಶತ ಮಾನಕ್ಕೆ ಕಾಂಗ್ರೆಸ್ ಎದ್ದು ಬರುವುದಿಲ್ಲ ಎಂದು ಕಾಂಗ್ರೆಸ್ ಮತ್ತು  ಉಗ್ರಪ್ಪ ವಿರುದ್ದ ಡಿವಿಎಸ್ ಕಿಡಿಕಾರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ