ಶೀಲ ಶಂಕಿಸಿದ್ದಕ್ಕೆ ಬೆಂಕಿ ಹಚ್ಚಿಕೊಂಡ ಮಹಿಳೆ ಸಾವು!

#Wife  #Doubt  #Suicide

21-09-2018

ಬೆಂಗಳೂರು: ಶೀಲ ಶಂಕಿಸಿ ಪತಿ ಮಾಡುತ್ತಿದ್ದ ಜಗಳದಿಂದ ಬೇಸತ್ತ ಮಹಿಳೆಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೇವರಜೀವನ(ಡಿಜೆ)ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ಯಾಂಪುರದಲ್ಲಿ ನಡೆದಿದೆ.

ಶ್ಯಾಂಪುರದ ಜಯಲಕ್ಷ್ಮಿ(37)ಎಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಗುರುತಿಸಲಾಗಿದೆ. ಜಯಲಕ್ಷ್ಮಿ ಕಳೆದ ಕೆಲ ವರ್ಷಗಳಿಂದ ಡಿಜೆ ಹಳ್ಳಿಯಲ್ಲಿ ವಾಸವಿದ್ದು, 10 ವರ್ಷಗಳ ಹಿಂದೆ ನಾಗರಾಜ್‍ನನ್ನು ಮದುವೆಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಗಂಡನ ಅನುಮಾನದಿಂದ ಪ್ರತಿದಿನ ಗಲಾಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಜಯಲಕ್ಷ್ಮಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


ಸಂಬಂಧಿತ ಟ್ಯಾಗ್ಗಳು

Doubt Wife ಅನುಮಾನ ಮದುವೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ