ನಕಲಿ ದಾಖಲೆ ಸೃಷ್ಠಿಸಿ ವಂಚನೆ: ಉದಯ್ ಗೌಡ ಬಂಧನಕ್ಕೆ ಕ್ರಮ!

#Uday Gowda #Illegal documents #Srilanka

21-09-2018

ಬೆಂಗಳೂರು: ನಕಲಿ ಆಸ್ತಿ ದಾಖಲೆಗಳನ್ನು ಸೃಷ್ಠಿಸಿ ವಂಚಿಸಿರುವ ಆರೋಪದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಪರಾರಿಯಾಗಿರುವ ಉದಯ್ ಗೌಡ ಶ್ರೀಲಂಕಾದಲ್ಲಿರುವ ಮಾಹಿತಿ ಕಲೆ ಹಾಕಿರುವ ನಗರ ಪೊಲೀಸರು ಆತನ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಶೇಷಾದ್ರಿಪುರಂ ಮನೆ ಮೇಲೆ ಪೊಲೀಸರು ದಾಳಿ ಮಾಡುತ್ತಿದ್ದಂತೆ ಪರಾರಿಯಾಗಿದ್ದ ಉದಯ್ ಗೌಡ, ಮೊಬೈಲ್ ಲೋಕೇಷನ್ ಶ್ರೀಲಂಕಾದಲ್ಲಿ ತೋರಿಸುತ್ತಿರುವುದನ್ನು ಪತ್ತೆಹಚ್ಚಿರುವ ಪೊಲೀಸರು ಉದಯ್ ಗೌಡ ಬಂಧನಕ್ಕೆ ಶ್ರೀಲಂಕಾಕ್ಕೆ ತೆರಳಿದ್ದಾರೆ .

2017ರಲ್ಲಿ ಉದಯ್ ಗೌಡ ವಿರುದ್ಧ ಕೆ.ವಿ.ನಾಯ್ಡು ಎಂಬುವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಬ್ರಿಗೇಡ್ ರಸ್ತೆಯ ನೀಲಗಿರಿ ಪ್ರಾಪರ್ಟಿಸ್ ಕಬಳಿಸಲು ಪ್ರಯತ್ನಿಸಿದ ಆರೋಪ ಉದಯ್ ಗೌಡ ಮೇಲಿದೆ.


ಸಂಬಂಧಿತ ಟ್ಯಾಗ್ಗಳು

Uday Gowda Srilanka ಮೊಬೈಲ್ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ