ಸಿಎಂ ಕುಮಾರಸ್ವಾಮಿ ಹೇಳಿಕೆಯಲ್ಲಿ ತಪ್ಪೇನಿಲ್ಲ: ಮೊಯಿಲಿ

#Veerappa Moily #Kumaraswamy #Yeddyurappa

21-09-2018

ದೊಡ್ಡಬಳ್ಳಾಪುರ: ಸಿಎಂ ಕುಮಾರಸ್ವಾಮಿ 'ದಂಗೆ' ಹೇಳಿಕೆಯನ್ನು ಮಾಜಿ ಸಿಎಂ ಹಾಗು ಸಂಸದ ವೀರಪ್ಪ ಮೊಯಿಲಿ ಸಮರ್ಥಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ಸಂವಿಧಾನಾತ್ಮಕವಾಗಿ ರಚನೆಗೊಂಡ ಸರ್ಕಾರವನ್ನ ವಾಮಮಾರ್ಗದ ಮೂಲಕ ಬೀಳಿಸೋದೋ ಎಷ್ಟು ಸರಿ? ಅಂತಹ ಮಾರ್ಗವನ್ನ ಹಿಡಿಯುವ ಪಕ್ಷದ ಮೇಲೆ ಅಥವ ಮುಖಂಡರ ಮೇಲೆ ದಂಗೆ ಏಳಲೇಬೇಕು, ಸಿಎಂ ಹೇಳಿಕೆಯಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

‘ಅವರು 18 ಶಾಸಕರನ್ನ ಅಪಹರಿಸಿದರೆ ಇಲ್ಲಿ ನಾವು 20 ಬಿಜೆಪಿಯ ಶಾಸಕರನ್ನ ಸೆಳೆಯುತ್ತೇವೆ. ಯಾರು ಶಾಸಕರನ್ನ ಅಪಹರಣ ಅಥವಾ ಖರೀದಿಗೆ ಮುಂದಾಗ್ತಾರೆ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು' ಎಂದಿದ್ದಾರೆ.

ತಮಗೆ ಮೋದಿ ಸರ್ಕಾರದ ಬೆಂಬಲ ಇದೆ ಎಂಬ ಬಿಎಸ್ ವೈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮೊಯಿಲಿ, ‘ಯಡಿಯೂರಪ್ಪಗೆ ದುರಹಂಕಾರ ಹೆಚ್ಚಾಗಿದೆ, ಕೇಂದ್ರ ಸರ್ಕಾರ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ' ಎಂದು ಖಾರವಾಗಿಯೇ ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Veerappa Moily Yeddyurappa ಹೇಳಿಕೆ ಸರ್ಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ