ತಹಶೀಲ್ದಾರ್ ಮೇಲೆ ಹಲ್ಲೆ: 15 ಮಂದಿ ಬಂಧನ

#Kodagu  #Tahsildar #Court

21-09-2018

ಕೊಡಗು: ಜಿಲ್ಲೆಯ ಕುಶಾಲನಗರ ವಾಲ್ಮೀಕಿ ಪರಿಹಾರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಕೊಡಗು ಎಸ್.ಪಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂತ್ರಸ್ತರಲ್ಲದವರು ಪರಿಹಾರ ಸೇರಿಕೊಂಡಿದ್ದರು. ಹೀಗಾಗಿ ಪರಿಶೀಲನೆಗೆ ತಹಶೀಲ್ದಾರ್‌ ತೆರಳಿದ್ದರು. ಈ ವೇಳೆ ಸಂಜೀವ ಎಂಬವರು ತಹಶೀಲ್ದಾರ್ ಮೇಲೆ ಮೊದಲು ಹಲ್ಲೆ ಮಾಡಿದ್ದಾರೆ. ತಹಶೀಲ್ದಾರ್ ಸ್ವಯಂ ರಕ್ಷಣೆಗೆ ಮುಂದಾಗಿದ್ದನ್ನ ಹಲ್ಲೆ ಮಾಡಿದ್ದಾರೆಂದು ಬಿಂಬಿಸಲಾಗುತ್ತಿದೆ ಎಂದು ತಿಳಿಸಿದರು. ಅಲ್ಲಿನ‌ ಮಹಿಳೆಯರು ತಹಶೀಲ್ದಾರ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಈ ಎಲ್ಲ ಪ್ರಕರಣಗಳಿಂದ ಒಟ್ಟು 15 ಜನರನ್ನು ಬಂಧಿಸಲಾಗಿದೆ. ನಾಳೆ ಆರೋಪಿಗಳನ್ನು ಓಪನ್ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Kodagu Tahsildar ತಹಶೀಲ್ದಾರ್ ಮಹಿಳೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ