'ಇಂತಹ ಕೆಟ್ಟ ರಾಜಕಾರಣ ಯಾರೂ ಮಾಡಿಲ್ಲ'

#K.S.Eshwarappa  #Protest  #BJP  #Kumaraswamy

21-09-2018

ಶಿವಮೊಗ್ಗ: ಮುಖ್ಯಮಂತ್ರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು  ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ. ಶಿವಮೊಗ್ಗದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ‘ನಿಮ್ಮ ಶಾಸಕರ ರಕ್ಷಣೆ ಮಾಡುವ ಯೋಗ್ಯತೆ ಇಲ್ಲ, ರಾಜ್ಯದ ಜನರ ರಕ್ಷಣೆ ಮಾಡೋಕೆ ನಿಮ್ಮಿಂದ ಹೇಗೆ ಸಾಧ್ಯ’? ಎಂದು ಕುಟುಕಿದ್ದಾರೆ.

‘ಮುಖ್ಯಮಂತ್ರಿಗಳೊಬ್ಬರು ದಂಗೆ ಏಳಿ ಅಂತ ಹೇಳಿದ್ರೆ ಏನರ್ಥ..? ಗೃಹ ಇಲಾಖೆ ಏನ್ ಮಾಡ್ತಿದೆ, ಗೃಹ ಸಚಿವ ಪರಮೇಶ್ವರ್ ರವರು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ತನ್ನ ಹತ್ತಿರವೂ ಮೂವರು ಶಾಸಕರು ಬಂದಿದ್ದಾರೆ, ಬಿಜೆಪಿಗೆ ಸೇರುತ್ತೇವೆ ಎನ್ನುತ್ತಿದ್ದಾರೆ. ನಿಮ್ಮ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಂಡಿಲ್ಲ ನೀವು. ಬರ್ತೀವಿ ಎನ್ನುವವರನ್ನು ಬೇಡ ಅನ್ನೋಕೆ ಬರೋಲ್ಲ ಎಂದ ಈಶ್ವರಪ್ಪ, ರಾಜ್ಯಪಾಲರು ಇತ್ತ ಗಮನಹರಿಸಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

‘ಮಾಜಿ ಸಿಎಂ ಸಿದ್ದರಾಮಯ್ಯ ಈ ನಾಟಕದ ಸೂತ್ರಧಾರ. ಅವರು ಕುತಂತ್ರ ರಾಜಕಾರಣ ಮಾಡ್ತಾ ಇದ್ದಾರೆ, ಇದೆಲ್ಲ ಕೆಟ್ಟ ಹೆಸರು ತರುವ ಪ್ರಯತ್ನ. ಇಂತಹ ಕೆಟ್ಟ ರಾಜಕಾರಣ ಯಾರೂ ಮಾಡಿರಲಿಲ್ಲ’ ಎಂದು ಟೀಕೆ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.S.Eshwarappa Protest ನಾಟಕ ರಾಜಕಾರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ