ಹೆದರಿದ ಅಪ್ರಾಪ್ತ ಹುಡುಗ ಆತ್ಮಹತ್ಯೆಗೆ ಯತ್ನ !

Kannada News

02-06-2017

ಬೆಂಗಳೂರು:- 25 ವರ್ಷದ ಯುವತಿಯೊಬ್ಬಳನ್ನು ಗರ್ಭವತಿಯನ್ನಾಗಿಸಿ, ವಿಷಯ ತಿಳಿದ ನಂತರ ಯವತಿ ಮದುವೆಯಾಗುವಂತೆ ಪೀಡಿಸಲಾರಂಭಿಸಿದ್ದರಿಂದ ಹೆದರಿದ ನೆರೆಮನೆಯ ಅಪ್ರಾಪ್ತ ಹುಡುಗ ನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕ್ರಿಮಿನಾಶಕ ಹಾಗೂ ಕೈಗೆ ಸಿಕ್ಕ ಮಾತ್ರೆಗಳನ್ನು ಅಪ್ರಾಪ್ತ ಹುಡುಗು ನುಂಗಲು ಯತ್ನಿಸಿದ್ದು ಆತನನ್ನು ತಡೆದಿರುವುದಾಗಿ ತಂದೆ ತಾಯಿ ತಿಳಿಸಿದ್ದಾರೆ ಆದರೆ ಅಪ್ರಾಪ್ತ ಹುಡುಗ ಹಾಗೂ ಯುವತಿ ಪ್ರೀತಿಸುತ್ತಿರುವುದು ಪೊಲೀಸರ ವಿಚಾರಣೆಯಲ್ಲಿ ಕಂಡುಬಂದಿದೆ. ಜಯನಗರದಲ್ಲಿ ಮನೆಯೊಂದರಲ್ಲಿ ವಾಸವಿರುವ ಈ ಹುಡುಗ ಪ್ರಥಮ ಖಾಸಗಿ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದಾನೆ. 'ನನ್ನ ಮಗ ಆಘಾತದಿಂದ ಇನ್ನೂ ಹೊರಬಂದಿಲ್ಲ.ಯುವತಿ ಕಡೆಯವರು ಹುಡುಗನ ಜತೆ ಮದುವೆ ಮಾಡುವಂತೆ ಬೆದರಿಸುತ್ತಿದ್ದಾರೆ. ನಮ್ಮನ್ನು ಮನೆಗೆ ಕರೆಸಿಕೊಂಡು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1-30ರ ವರೆಗೆ ನಮಗೆ ಮಾನಸಿಕ ಹಿಂಸೆ ನೀಡಿದ್ದಲ್ಲದೆ, ನಮಗೆ ಮೂರು ಅವಕಾಶ ನೀಡಿದ್ದಾರೆ. ಮೊದಲನೆಯದು ಕೂಡಲೇ ಮದುವೆ ಮಾಡಿಕೊಡಬೇಕು, ಎರಡನೆಯದು ಮಗುವನ್ನು ಸಾಕಿಕೊಳ್ಳಬೇಕು, ಮೂರನೆಯದು ನಿಮ್ಮ ಹುಡುಗ ಪ್ರಾಪ್ತ ವಯಸ್ಕನಾಗುತ್ತಿದ್ದಂತೆ ಮದುವೆ ಮಾಡಿಕೊಡುತ್ತೇವೆ ಎಂದು ಲಿಖಿತ ಭರವಸೆ ನೀಡಬೇಕು ಎಂಬುದಾಗಿದೆ. ಯುವತಿಯು ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ. ದುರದೃಷ್ಟವಶಾತ್ ಅವಳ ಕುಟುಂಬದವರೂ ಅವಳನ್ನೇ ಬೆಂಬಲಿಸುತ್ತಿದ್ದಾರೆ. ಈಗ ನನ್ನ ಮಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹುಡುಗನ ತಂದೆ ತಾಯಿಗಳು ಹೇಳಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸಿರುವ ಆಗ್ನೇಯ ವಿಭಾಗದ ಪೊಲೀಸರು ಯುವತಿ ಹಾಗೂ ಹುಡುಗ ಪ್ರೀತಿಸುತ್ತಿದ್ದು ಆಕೆ ಗರ್ಭಿಣಿಯಾದ ನಂತರ ಜಗಳ ಆರಂಭಗೊಂಡಿದೆ, ಈ ಸಂಬಂಧ ಯಾವುದೇ ದೂರು ಬಂದಿಲ್ಲ ಅಪ್ರಾಪ್ತನೊಂದಿಗೆ  ಈ ರೀತಿ ಸಂಬಂಧದಲ್ಲಿ ಇಬ್ಬರದು ತಪ್ಪು  ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೂರು ಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ