ಮರಳು ಮಾಫಿಯಾ: ತಡೆಯಲು ಹೋದ ಮಹಿಳೆಯರ ಕೊಲೆಗೆ ಯತ್ನ!

#Sand Mafia #Nagamangala #

21-09-2018

ಮಂಡ್ಯ: ಅಕ್ರಮ ಮರಳು ಮಾಫಿಯಾ ತಡೆಯಲು ಹೋದ ಮಹಿಳೆಯ ಮೇಲೆ ಟ್ರಾಕ್ಟರ್ ಹಾಗೂ ಜೆಸಿಬಿಯಿಂದ ಡಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಘಟನೆ ನಾಗಮಂಗಲ ತಾಲ್ಲೂಕಿನ ಕತ್ರಿಗುಪ್ಪೆ ಗ್ರಾಮದ ಬಳಿ ನಡೆದಿದೆ. ಕಳೆದ ರಾತ್ರಿ ಗ್ರಾಮಸ್ಥರು ಮಾಫಿಯಾ ತಡೆಯಲು ಹೋದಾಗ ಘಟನೆ ನಡೆದಿದೆ‌.

ಘಟನೆಯಲ್ಲಿ ಭಾಗ್ಯಮ್ಮ, ಪುಟ್ಟಮ್ಮ, ಅರಸೇಗೌಡ, ಕಾಳೆಗೌಡ ಎಂಬವರಿಗೆ ಗಾಯವಾಗಿದ್ದು, ಗಾಯಾಳುಗಳಿಗೆ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ನಾಗಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ‌.

ಕಳೆದ ರಾತ್ರಿ ಮರಳು ತೆಗೆಯಲು ಮಾಫಿಯಾದವರು ಬಂದಿದ್ದಾರೆ ಎಂಬ ವಿಚಾರ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಆಗ ವಿಚಲಿತಗೊಂಡ ಮಾಫಿಯಾದವರು ಗ್ರಾಮಸ್ಥರ ಮೇಲೆ ಟ್ರಾಕ್ಟರ್ ‌ನಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ನಂತರ ಜೆಸಿಬಿಯಿಂದ ಡಿಕ್ಕಿ ಹೊಡೆದು ಹಲ್ಲೆ ಮಾಡಿದ್ದಾರೆ. ವಿಚಾರ ತಿಳಿದ ಬೆಳ್ಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಟ್ರಾಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು‌ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sand Mafia Nagamangala ಟ್ರ್ಯಾಕ್ಟರ್ ಮಾಫಿಯಾ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ