ಬಿಜೆಪಿ ಮೇಲೆ ಗೂಬೆ ಕೂರಿಸ್ತಿದ್ದಾರೆ: ಗೋವಿಂದ ಕಾರಜೋಳ

#H.D.Kumaraswamy #Govind karjol #yeddyurappa

21-09-2018

ಬೆಂಗಳೂರು: 'ಸಿಎಂ ಸ್ಥಾನದಲ್ಲಿರುವ ಕುಮಾರಸ್ವಾಮಿ ಅವರು‌ ಈ ರೀತಿಯ ಹೇಳಿಕೆ ನೀಡಿರೋದು ಸರಿಯಲ್ಲ' ಎಂದು ಜಿಜೆಪಿ ಮುಖಂಡ ಗೋವಿಂದ ಕಾರಜೋಳ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ‌'ಸಿಎಂ ಸ್ಥಾನದಲ್ಲಿ ಕೂತು ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡಿರೋದು ಸರಿಯಲ್ಲ. ನಿನ್ನೆ ಬಿಎಸ್ವೈ ಮನೆಗೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದಾರೆ. ಇದು ಸರ್ಕಾರದ ಕುಮ್ಮಕ್ಕಿನಿಂದ ನಡೆದ ಯತ್ನ ಎಂದು ಆರೋಪಿಸಿದ್ದಾರೆ.

‘ಸ್ವತಃ ಸಿಎಂ ಅವರೇ ದಂಗೆ ಏಳಲು ಕರೆ ಕೊಡುತ್ತಾರೆ ಅಂದ್ರೆ, ನಾವು ಸ್ವಾತಂತ್ರ್ಯ ಭಾರತದಲ್ಲಿ ಇದ್ದೀವಾ ಅನ್ನೋ ಸಂಶಯ ಹುಟ್ಟುತ್ತಿದೆ. ಸಿಎಂ ಕುಮಾರಸ್ವಾಮಿ ಕೇವಲ ಕುರ್ಚಿ ಆಸೆಗೆ ಸಿಎಂ ಆಗಿದ್ದಾರೆ. ಅವರ ಶಾಸಕರನ್ನ ಹತೋಟಿಯಲ್ಲಿಡಲು ಆಗಿಲ್ಲ, ಹಾಗಾಗಿ ಇವರು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

H.D.Kumaraswamy Govind karjol ಸಂಶಯ ಹತೋಟಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ