ಅಕ್ರಮ ಸ್ಫೋಟಕಗಳ ಸಂಗ್ರಹಗಾರವಾಯಿತೇ ಸಕ್ಕರೆ ನಾಡು..!

#Illegal #Stone Mining

21-09-2018

ಮಂಡ್ಯ: ಕಳೆದ ವಾರವಷ್ಟೇ ಸ್ಥಳೀಯ ಶಾಸಕರು ಮಂಡ್ಯ ಜಿಲ್ಲೆ ಏನು ‘ಟೆರರಿಸಂ ರಾಷ್ಟ್ರನಾ’ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಕಾರಣವೂ ಇತ್ತು. ಆದರೆ ಸಾಕ್ಷಿ ಸಿಕ್ಕಿರಲಿಲ್ಲ. ಆದರೆ ಕಳೆದ ರಾತ್ರಿ ಇದಕ್ಕೆ ಉತ್ತರ ಸಿಕ್ಕದೆ. ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಪ್ರಶ್ನೆಗಳ ಹುಟ್ಟಿಗೆ ಕಾರಣವಿದೆ. ಯಾಕೆಂದರೆ ಜಿಲ್ಲೆಯ ಹಲವು ಕಡೆ ಅಕ್ರಮ ಕಲ್ಲು ಕ್ವಾರೆಗಳಲ್ಲಿ ಜಿಲೆಟಿನ್ ನಂತಹ ಸ್ಫೋಟಕಗಳು ಪತ್ತೆ ಆಗುತ್ತಿರುವುದು.

ಹೌದು, ಕಳೆದ ರಾತ್ರಿ ಎಸ್ಪಿ ಶಿವಪ್ರಕಾಶ್ ದೇವರಾಜು ನೇತೃತ್ವದಲ್ಲಿ ನಾಗಮಂಗಲದ ಗಂಗ ಸಮುದ್ರದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಕ್ವಾರೆಯ ಮೇಲೆ ದಾಳಿ ಮಾಡಿದಾಗ ಅಕ್ರಮ ಸ್ಫೋಟಕಗಳು ಪತ್ತೆಯಾಗಿವೆ. ಈ ಸ್ಫೋಟಕಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಪ್ರಕರಣ ಸಂಬಂಧ ಪ್ರಭಾವಿ ರಾಜಕಾರಣಿಯ ಬಂಟನಾಗಿರುವ ಮಾಲೀಕ ಕರೀಗೌಡನ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ‌. ಸ್ಥಳದಲ್ಲಿದ್ದ ಮ್ಯಾನೇಜರ್ ಬೆಟ್ಟೇಗೌಡ ಹಾಗು ಮತ್ತೊಬ್ಬ ಮಂಜು ಎಂಬುವರನ್ನು ಬಂಧಿಸಲಾಗಿದ್ದು, ಮಾಲೀಕನಿಗಾಗಿ ಶೋಧನಾ ಕಾರ್ಯ ಆರಂಭಿಸಿದ್ದಾರೆ.

ಕೇವಲ ನಾಗಮಂಗಲದ ಇದೊಂದೆ ಕ್ವಾರೆಯಲ್ಲಿ ಜಿಲೆಟಿನ್ ಬಳಸುತ್ತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ತವರು ಗ್ರಾಮ ಚಿನಕುರಳಿ, ಬೇಬಿ ಬೆಟ್ಟ ಸೇರಿದಂತೆ ಶ್ರೀರಂಗಪಟ್ಟಣ ತಾಲ್ಲೂಕಿನ ಕ್ವಾರೆಗಳಲ್ಲೂ ಸ್ಫೋಟಕಗಳನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇಂತಹ ಕ್ವಾರೆಗಳ ಮೇಲೂ ದಾಳಿ ಮಾಡಿ ನಮಗೆ ನೆಮ್ಮದಿ ನೀಡಿ ಎಂದು ಸ್ಥಳೀಯ ಜನತೆ ಮನವಿ ಮಾಡುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Stone Mining Illegal ಶ್ರೀರಂಗಪಟ್ಟಣ ಕ್ವಾರೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ