ಒಳಜಗಳದಿಂದಲೇ ಸರ್ಕಾರ ಬೀಳುವ ಸ್ಥಿತಿಯಲ್ಲಿದೆ: ಕಾಗೇರಿ

#CM Kumaraswamy #Vishweshwar Hegde Kageri #Democracy

21-09-2018

ಉತ್ತರ ಕನ್ನಡ: ‘ಬಿಜೆಪಿ ವಿರುದ್ಧ ದಂಗೆಗೆ ಕರೆ ನೀಡುತ್ತೇವೆ’ ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ. ಶಿರಸಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ರೀತಿಯ ಹೇಳಿಕೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರು ಕ್ಷಮೆ ಯಾಚಿಸಬೇಕು. ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

‘ಯಡಿಯೂರಪ್ಪನವರ ಮನೆ ಮೇಲೆ ದಾಳಿಯಾಗಿರುವುದನ್ನೂ ಖಂಡಿಸುತ್ತೇವೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಇದು ಜೆಡಿಎಸ್-ಕಾಂಗ್ರೆಸ್ ನ ಗೂಂಡಾಗಳ ಕೆಲಸ, ಅವರ ಒಳಜಗಳದಿಂದಲೇ ಸರ್ಕಾರ ಬೀಳುವ ಸ್ಥಿತಿ ತಲುಪಿದೆ, ಇದನ್ನರಿತ ಮುಖ್ಯಮಂತ್ರಿಗಳು ದಂಗೆಗೆ ಪ್ರಚೋದನೆ ನೀಡುತ್ತಿದ್ದಾರೆ' ಎಂದು ದೂರಿದ್ದಾರೆ.

 ಸರ್ಕಾರ ತನ್ನ ಕೆಲಸ ನಿರ್ವಹಿಸುವುದನ್ನು ಬಿಟ್ಟು ಜಗಳವಾಡುತ್ತಿದೆ. ಇವರ ಆಂತರಿಕ ಕಚ್ಚಾಟದಿಂದ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ನುಡಿದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Vishweshwar Hegde Ka CM Kumaraswamy ಮಾರಕ ಒಳಜಗಳ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ