ಕಳ್ಳ ದಂಪತಿ ಸೇರಿ 8 ಮಂದಿ ಗ್ಯಾಂಗ್ ಬಂಧನ

#Passengers #Gang #Husband and Wife

20-09-2018

ಬೆಂಗಳೂರು: ಪ್ರಯಾಣಿಕರ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ದಂಪತಿ ಸೇರಿ ಐವರು ಸಂಬಂಧಿಕರ ಗ್ಯಾಂಗ್ ಸೇರಿ 8 ಮಂದಿಯನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು ನಗದು ಸೇರಿ 37 ಲಕ್ಷ 65 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರಜಿಲ್ಲೆ ಬೇತಮಂಗಲದ ವೆಂಕಟೇಶ್ (39) ಆತನ ಪತ್ನಿ ಲಕ್ಷ್ಮಿ ಅಲಿಯಾಸ್ ವರಲಕ್ಷ್ಮಿ (30), ಆನೇಕಲ್‍ನ ಹುಲಿಮಂಗಲದ ಮನುಕುಮಾರ್ ಅಲಿಯಾಸ್ ಮನು (29), ತಮಿಳುನಾಡಿನ ಬಳ್ಳೂರಿನ ಭಾಗ್ಯಮ್ಮ ಅಲಿಯಾಸ್ ಭಾಗ್ಯ (50), ಮಾಗಡಿ ರಸ್ತೆ ಗೊಲ್ಲರಹಟ್ಟಿಯ ಮಂಜ ಅಲಿಯಾಸ್ ಪಾನಿಪುರಿ ಮಂಜ (24)ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧಿಕರಾಗಿದ್ದಾರೆ.

ಕಳ್ಳತನ ಕೃತ್ಯ ವೆಸಗುವ ವೇಳೆ ಪರಿಚಿತನಾಗಿದ್ದ ಜೀವನ್‍ಪಾಳ್ಯದ ಅಮ್ಜದ್ ಅಲಿಯಾಸ್ ಅಂಗದ್ ಸಿಂಗ್ (30) ಕೂಡ ಬಂಧಿತರ ಗ್ಯಾಂಗ್ ಸೇರಿಕೊಂಡಿದ್ದನು. ಬಂಧಿತ ಗ್ಯಾಂಗ್‍ನ ಎಲ್ಲರೂ ಹಿಂದೆ ಅಪರಾಧ ಕೃತ್ಯಗಳಲ್ಲಿ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದು ಮೂರ್ನಾಲ್ಕು ತಿಂಗಳಿಗೆ ಮನೆ ಬದಲಿಸಿಕೊಂಡು ತಿರುಗುತ್ತಿದ್ದರು ಇವರೆಲ್ಲರ ಮೇಲೂ ವಾರೆಂಟ್ ಜಾರಿಯಾಗಿದ್ದರಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಲು ಕೋಲಾರ,ಪಾಂಡವಪುರ,ಮಂಡ್ಯ,ಕುಣಿಗಲ್ ಇನ್ನಿತರ ಕಡೆಗಳಲ್ಲಿ 3-4 ತಿಂಗಳಿಗೊಮ್ಮ ಮನೆ ಬದಲಿಸಿ ಕೃತ್ಯ ಎಸಗುತ್ತಿದ್ದರು.


ಸಂಬಂಧಿತ ಟ್ಯಾಗ್ಗಳು

passengers Relatives ಬಿಡುಗಡೆ ಪ್ರಯಾಣಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ